ಶಿಗ್ಗಾವ್

ವರದಿಗಾರ ಕಾರ್ಯ ನಿಷ್ಠೆ ಶ್ಲಾಘನೀಯ: ಚನ್ನಬಸವೇಶ್ವರ ಶ್ರೀ

ವರದಿಗಾರ ಕಾರ್ಯ ನಿಷ್ಠೆ ಶ್ಲಾಘನೀಯ: ಚನ್ನಬಸವೇಶ್ವರ ಶ್ರೀ

ಶಿಗ್ಗಾವಿ 13 : ಕೊರೊನಾ ತುರ್ತು ಸಮಯದಲ್ಲಿ ತಾಲೂಕಿನ ಎಲ್ಲ ವರದಿಗಾರರು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಕಾಯ ನಿಷ್ಠೆಯನ್ನು ಮೆರೆದಿದ್ದಾರೆ ಎಂದು ಗಂಗೇಭಾವಿ ಮಠದ  ಗೋಚಲ ಚನ್ನಬಸವೇಶ್ವರ ಶಿವಾರ್ಚಾಯ ಮಹಾಸ್ವಾಮಿಗಳು ಹೇಳಿದರು. 

ತಾಲೂಕಿನ ಸುಕ್ಷೇತ್ರ ಗಂಗೇಬಾವಿ ಮಠದವತಿಯಿಂದ ತಾಲೂಕಿನ ವರದಿಗಾರರಿಗೆ ಆರ್ಶೀವದಿಸಿ ನಂತರ ದಿನಸಿ ಕಿಟ್ ನೀಡಿ ಮಾತನಾಡಿದ ಶ್ರೀಗಳು ತಾಲೂಕಿನ ವರದಿಗಾರರಿಗೆ ಯಾವುದೇ  ಸರಕಾರಿ ಸೌಲಭ್ಯವಿರುವುದಿಲ್ಲ ಹಾಗೂ ಅವರನ್ನು ಪ್ರಂಟ್ ಲೈನ್ ವರ್ಕರು ಅನ್ನುತ್ತಾರೆ ಆದರೆ ಅವರ ಜೀವನ ನಿರ್ವಹಣೆ ಕಷ್ಟ ಏಕೆಂದರೆ ತಾಲೂಕಿನ ವರದಿಗಾರರಿಗೆ ವೇತನ ಇರುವುದಿಲ್ಲ ಅವರು ಹೇಗೆ ಜೀವನ ನಿರ್ವಹಣೆ ಮಾಡಬೇಕು ಅಲ್ಲದೇ ವರ್ಷದ 24 ಗಂಟೆಯೂ ಸಹಿತ ಚಳಿ,ಬಿಸಿಲು, ಮಳೆ ಲೆಕ್ಕಿಸದೇ ವರದಿ ಮಾಡಬೇಕು ಆದರೆ ಅವರಿಗೆ ಅದಕ್ಕೆ ತಕ್ಕ ಹಾಗೆ ಪ್ರತಿಫಲವಿಲ್ಲ ಆದ್ದರಿಂದ ಸರಕಾರ ಮೃದು ದೋರಣೆ ತೋರದೇ ವರದಿಗಾರರಿಗೆ ಭದ್ರತೆ ಹಾಗೂ ವಿಶೇಷ ಸೌಲಭ್ಯಗಳನ್ನು ಒದಗಿಸಲಿ ಎಂದು ಸರಕಾರಕ್ಕೆ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಅರ್ಜಪ್ಪ ಲಮಾಣಿ, ಶ್ರೀಮಠದ ಭಕ್ತರಾದ ಚನ್ನಪ್ಪ ಬಿಂದ್ಲಿ, ಶಂಭಣ್ಣಾ ಸೂರಗೊಂಡ, ಮಾದೇವಪ್ಪ ದೇವತಿ, ಬಸಯ್ಯ ಕಬನೂರ, ಬಸವರಾಜ ಬರದೂರ, ಈರಣ್ಣಾ ಡವಗಿ, ಈರಣ್ಣಾ ತೆಗ್ಗಿಹಳ್ಳಿ, ಮಾದೇವಯ್ಯ ನಾಗನೂರ, ನೀಲಕಂಠಗೌಡ್ರ ನೀರಲಗಿ, ುಷಣ್ಮುಖಯ್ಯ ಡವಗಿ, ಕಾಳಪ್ಪ ಬಡಿಗೇರ, ಗದಿಗೆಯ್ಯ ಯತ್ನಳ್ಳಿ, ಮಲ್ಲಿಕಾರ್ಜುನಯ್ಯ ಯತ್ನಳ್ಳಿ, ಚಂದ್ರಣ್ಣಾ ಬಾರೀಗೀಡದ, ಶಿವಪ್ಪ ಬಡಿಗೇರ ಸೇರಿದಂತೆ ಮಠದ ಸಧ್ಬಕ್ತರು ಉಪಸ್ಥಿತರಿದ್ದರು.    ಕಾರ್ಯಕ್ರಮವನ್ನು ಹಿರಿಯ ವರದಿಗಾರರಾದ ಬಿ.ಎಸ್‌.ಹಿರೇಮಠ ಸ್ವಾಗತಿಸಿದರು, ಎಂ.ವಿ.ಗಾಡದ ವಂದಿಸಿದರು, ಜಾನಪದ ವಿ.ವಿ. ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ