ರಸ್ತೆ ಗುಂಡಿಗಳ ದುರಸ್ತಿ : ವಾಹನ ಸವಾರರು ನಿರಾಳ
ತಾಳಿಕೋಟಿ: ಮನಗೂಳಿ-ಬಿಜ್ಜಳ ರಾಜ್ಯ ಹೆದ್ಧಾರಿ 61ರ ಮಾರ್ಗದ ಬಲಗಾನೂರ ಸ"ುಪದ ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗು-ಗುಂಡಿಗಳು ಬಿದ್ದು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿತ್ತು ಲೊಕೋಪಯೋಗಿ ಇಲಾಖೆ ಇದನ್ನು ಇದಿಗ ದುರಸ್ತಿ ಮಾಡಿರುವುದರಿಂದ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ಸುಮಾರು 5 ವರ್ಷಗಳ "ಂದೆ ನಿರ್ಮಾಣಗೊಂಡ ಮನಗೂಳಿ-ಬಿಜ್ಜಳ ರಾಜ್ಯ ಹೆದ್ಧಾರಿ 61ರ ಈ ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ-ದೊಡ್ಡ ಗುಂಡಿಗಳು ಬಿದ್ದು ವಾಹನ ಸವಾರರನ್ನು ಮೃತ್ಯುಕೂಪಕ್ಕೆ ಆಹ್ವಾನಿಸುತ್ತಿದ್ದವು, ಇಗಾಗಲೆ ಈ ರಸ್ತೆಯಲ್ಲಿ ಕೆಲವು ಅಪಘಾತಗಳು ಸಂಭ"ಸಿ ಅಮೂಲ್ಯ ಜಿವಗಳು ಬಲಿಯಾಗಿವೆ. ಎರಡು ದಿನಗಳ "ಂದೆ ಸ"ುಪದ ಬಳಗಾನೂರ ಗ್ರಾಮದ ಹತ್ತಿರದ ರಸ್ತೆಯ ಮೇಲಿನ ಗುಂಡಿಂದಾಗಿ ವಾಹನ ಸವಾರನೊಬ್ಬ ಬಿದ್ದು ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ಸೆರಿದ್ದಾನೆ. ಈ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನಕೂಲ ಮಾಡಿಕೊಡಬೆಕೆಂಬುದು ವಾಹನ ಸವಾರರ ತಿವ್ರ ಬೇಡಿಕೆಯಾಗಿತ್ತು ಇದಕ್ಕೆ ತಕ್ಷಣ ಸ್ಪಂದಿಸಿದ ಲೊಕೋಪಯೋಗಿ ಇಲಾಖೆಯ ಎಇಇ ಆರ್. ಎಂ. ಹುಂಡೇಕಾರ ಹಾಗೂ ಸಾಹಾಯಕ ಅಭಿಯಂತರ ಸಂದೀಪ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಈ ಗುಂಡಿಗಳ ತಾತ್ಕಾಲಿಕ ದುರಸ್ತಿ ಕಾರ್ಯ ಮಾಡಿಸಿದ್ದಾರೆ. ಇದರಿಂದ ವಾಹನ ಸವಾರರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗಿದ್ದರೂ ಇದರ ಶಾಶ್ವತ ಪರಿಹಾರ ಆಗಬೇಕೆಂದು ಅವರು ತಿಳಿಸುತ್ತಾರೆ.