‘ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ಸ್ಮರಿಸುವ ದಿನ’
ಶಿಗ್ಗಾವಿ 16: ನಮ್ಮ ದೇಶಕ್ಕೆ ಸ್ವಾತಂತ್ರ ಸಿಗಲು ಅನೇಕ ಮಹನೀಯರು ತಮ್ಮ ಜೀವನವನ್ನು ತ್ಯಾಗ ಮಾಡಿದ ಪ್ರತಿಫಲವೇ ನಮಗೆ ಅಜಾದ ಕಾ ಅಮೃತ ಮಹೋತ್ಸವ ಆಚರಿಸಲು ಕಾರಣ ಎಂದು ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಅಧ್ಯಕ್ಷೆ ಸ್ನೇಹಲತಾ ಎಂ. ಕುನ್ನೂರ ಹೇಳಿದರು.
ಪಟ್ಟಣದ ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ, ಚನ್ನಪ್ಪ ಕುನ್ನೂರ ಆಂಗ್ಲ ಮಾದ್ಯಮ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ದಿನ ಹಾಗೂ ಸ್ವಾತಂತ್ರ ಸಿಗಲು ಹಗಲು ರಾತ್ರಿಯನ್ನದೇ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಆದ್ದರಿಂದ ನಾವು ಸಹ ಬಾಳ್ವೆಯಿಂದ ಜಾತಿ ವೈಷಮ್ಯ ಮಾಡದೇ ನಾವೇಲ್ಲರೂ ಒಂದೇ ಭಾರತ ಮಾತೆಯ ಮಕ್ಕಳು ಎಂದು ಅಭಿಪ್ರಾಯಪಟ್ಟರು.
ಶಾಲಾ ಮುಖ್ಯೋಪಾದ್ಯಾಯ ಎಸ್.ಹೆಚ್.ಹಾವೇರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧುರಾ ಯಲಿಗಾರ, ವಿಧ್ಯಾ ಹೆಸರೂರ ಮಾತನಾಡಿದರು. ಸಹ ಶಿಕ್ಷಕರಾದ ಮಾರುತಿ ಲಮಾಣಿ, ಮುದಾಸರ ಜಮಖಾನಾ, ಶೇಖರ ಪಾಟೀಲ, ಗಾಯತ್ರಿ ದೈವಜ್ಞ, ಆಸ್ಮಾ ಆಕ್ತಾರ ಉಪಸ್ಥಿತರಿದ್ದರು.
ಶಿಕ್ಷಕಿ ಮಂಜುಳಾ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಪಾತೀಮಾ ಮುಲ್ಲಾ ವಂದಿಸಿದರು, ಶಿಕ್ಷಕಿ ಪವಿತ್ರಾ ಕಿರೇಸೂರ ಕಾರ್ಯಕ್ರಮ ನಿರೂಪಿಸಿದರು.