ಶಿಗ್ಗಾವ್

ಪ್ರದೇಶಾಭಿವೃದ್ಧಿಗಾಗಿ ಧಾರ್ಮಿಕ ಧರ್ಮಯಜ್ಞ ಸಮಾರಂಭ

ಪ್ರದೇಶಾಭಿವೃದ್ಧಿಗಾಗಿ ಧಾರ್ಮಿಕ ಧರ್ಮಯಜ್ಞ ಸಮಾರಂಭ

ಶಿಗ್ಗಾವಿ 14:  ರಾಣೇಬೆನ್ನೂರ ಹಿರೇಮಠದ ವಿಶಾಲವಾದ ಪ್ರದೇಶದಲ್ಲಿ ಲೋಕಕಲ್ಯಾಣಾರ್ಥ ನಿರಂತರ 384 ದಿನಗಳವರೆಗೆ ಧಾರ್ಮಿಕ ಧರ್ಮಯಜ್ಞವನ್ನು 2020ರ ನವೆಂಬರ್ 11ರಂದು ಕಾಶಿ ಪೀಠದ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು ಚಾಲನೆ ನೀಡಿದ್ದು, 2021ರ ಡಿಸೆಂಬರ್ 4ರಂದು ಸಮಾರೋಪಗೊಳ್ಳಲಿದೆ ಎಂದು ರಾಣೇಬೆನ್ನೂರು ಮದ್ದರಕಿ ಹಿರೇಮಠದ ಶಿವಯೋಗಿ ಶಿವಾಚಾರ್ಯರು ಹೇಳಿದರು.

ತಾಲೂಕಿನ ಬಿಸನಳ್ಳಿ ಗ್ರಾಮದ ಕಾಶಿ ಶಾಖಾಮಠದಲ್ಲಿ ರಾಣೇಬೆನ್ನೂರ ಶನೈಶ್ಚರ ಮಂದಿರ ಬಯಲು ಆಲಯದಲ್ಲಿ ಲೋಕಕಲ್ಯಾಣಾರ್ಥ ಎರಡು ಮಹಾಮಂಡಳಗಳ ಕಾಲ (384 ದಿನಗಳು) ನಡೆಯುತ್ತಿರುವ ಧಾರ್ಮಿಕ ಧರ್ಮಯಜ್ಞ ಕಾರ್ಯಕ್ರಮದಲ್ಲಿ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ವೀರಶೈವಧರ್ಮ ಅಧ್ಯಾತ್ಮ ತತ್ವದ ತಳಹದಿಯ ಮೇಲೆ ಸನಾತನ ಕಾಲದಿಂದಲೂ ಜಗತ್ತಿಗೆ ಸಮಾನತೆ, ಸಮನ್ವಯತೆ, ವೈಚಾರಿಕತೆ, ವೈಜ್ಞಾನಿಕತೆ, ಸೌಮ್ಯತೆ, ಸೌಜನ್ಯತೆಗಳನ್ನು ಬೋದಿಸುತ್ತ ಈ ಮೌಲ್ವಿಕ ಸಿದ್ದಾಂತವನ್ನು ಜಗತ್ತಿಗೆ ಸಾರಿ ಭಾರತೀಯ ತತ್ವ ಸಿದ್ಧಾಂತಕ್ಕೆ ಸುವರ್ಣ ಕಿರಿಟಪ್ರಾಯವಾಗಿದೆ. ಪ್ರತಿವರ್ಷ ಶ್ರೀ ಮಠ ಲೋಕಕಲ್ಯಾಣಾರ್ಥವಾಗಿ ಒಂದಿಲ್ಲೋಂದು ವಿಶೇಷಕಾರ್ಯಕ್ರಮಗಳನ್ನು ಶ್ರೀ ಶನೈಶ್ಚರ ಮಂದಿರದ ಆವರಣದಲ್ಲಿ ಮಾಡುತ್ತಾ ಬರಲಾಗುತ್ತಿದ್ದು, ಈ ಹಿಂದೆ ಏಕಕಾಲಕ್ಕೆ 25 ಸಾವಿರ ಮಹಿಳೆಯರಿಂದ ಸಿದ್ಧಾಂತ ಶಿಖಾಮಣಿ ಪಾರಾಯಣವನ್ನು ಮಾಡಿಸಿದ ಕೀರ್ತಿ ಶ್ರೀಮಠದ ಸದ್ಭಕ್ತರಿಗೆ ಸಲ್ಲುತ್ತದೆ.  ಪ್ರಥಮ ಹಂತದಲ್ಲಿ ರಾಣೇಬೆನ್ನೂರ ತಾಲೂಕಿನ ಭಕ್ತಸಮೂಹಕ್ಕೆ ಪೂಜಾ ಕಾರ್ಯಕ್ರಮದಲ್ಲಿ ಬಾಗವಹಿಸಲು ಅವಕಾಶ ಕಲ್ಪಿಸಿಕೋಡಲಾಗಿದ್ದು, ಇಗ ಎರಡನೇ ಹಂತದಲ್ಲಿ ಶಿಗ್ಗಾವಿ ಹಾಗು ಸವಣೂರ ತಾಲೂಕಿನ ಭಕ್ತ ಸಮೂಹಕ್ಕೆ ಅವಕಾಶ ಕಲ್ಪಿಸಿಕೋಡಲಾಗುವುದು. 

ಸೇವಾರ್ಥಿಗಳಾದ ತಾ.ಪ.ಸದಸ್ಯ ಯಲ್ಲಪ್ಪ ನರಗುಂದ, ಎಸ್.ಕೆ.ಅಕ್ಕಿ ವಕೀಲರು, ರೇಣುಕಗೌಡ ಪಾಟೀಲ, ವಿರೇಶ ಆಜೂರ, ಮಲ್ಲಿಕಾರ್ಜುನ ಪಾಟೀಲ, ಗುರುಶಾಂತಪ್ಪ ನರೇಗಲ್, ಸೋಮು ಆಜೂರ, ಗದಿಗೇಪ್ಪ ಮಾ.ಪ.ಶೆಟ್ಟರ, ಚಂದ್ರಶೇಖರ ಸದಾಶಿವಪೇಟಿಮಠ, ಭದ್ರಪ್ಪ ಆಜೂರ, ಗಂಗಾಧರ ಬಡ್ಡಿ, ಮುರಗೇಶ ಆಜೂರ ಸೇರಿದಂತೆ ಪಾಠಶಾಲೆಯ ವಟುಗಳು ಇದ್ದರು.

ಸುದ್ದಿ ಓದಿ