ಧರ್ಮದ ಹಾದಿಯಲ್ಲಿ ಸಾಗಿದಾಗ ಜನ್ಮಸಾರ್ಥಕ: ಅನುಸೂಯಾ ಮಾತಾಜಿ
ಬೈಲಹೊಂಗಲ 22: ‘ಲೋಕ ಕಲ್ಯಾಣಾರ್ಥವಾಗಿ ಬೇವಿನಕೊಪ್ಪ ಆನಂದ ಆಶ್ರಮದ ವಿಜಯಾನಂದ ಸ್ವಾಮೀಜಿ ಅವರು ಪ್ರತಿ ವರ್ಷ ನಡೆಸುವ ಹೋಮ, ಹವನ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಈ ನಾಡಿನ ಜನರ ಏಳ್ಗೆಗೆ ಕಾಮಧೆೇನು ಕಲ್ಪವೃಕ್ಷವಾಗಿವೆ ಎಂದು ಮಹಾರಾಷ್ಟ್ರ ನಾಗಪೂರ ಜಿಲ್ಲೆಯ ಮಹಾಯೋಗಿನಿ ಆದಿಶಕ್ತಿ ಅನುಸೂಯಾ ಮಾತಾಜಿ ಹೇಳಿದರು.
ತಾಲೂಕಿನ ಬೇವಿನಕೊಪ್ಪ ಗ್ರಾಮದ ಆನಂದ ಆಶ್ರಮದ ವಿಜಯಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿ ಅವರು ಮಾತನಾಡಿ, ಮಾನವನ ಬದುಕಿಗೆ ಅಥರ್ ಸಿಗಬೇಕಾದರೆ ಸಾಧು, ಸಂತ, ಮಹಾತ್ಮಾರ ಅಮೃತವಾಣಿ ಆಲಿಸಬೇಕು. ಧರ್ಮದ ಹಾದಿಯಲ್ಲಿ ಮುನ್ನಡೆದು ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು. ವೇದ, ಪುರಾಣ, ಪ್ರವಚನಗಳನ್ನು ಆಲಿಸಿ ಬದುಕನ್ನು ಬಂಗಾರವಾಗಿಸಿಕೊಳ್ಳಬೇಕು. ದೇವರ ಮೇಲೆ ನಂಬಿಕೆ ಇಟ್ಟು ಶ್ರದ್ಧೆ, ಭಕ್ತಿಯಿಂದ ಪೂಜೆ, ಪ್ರಾರ್ಥನೆ ಮಾಡಿ ಸಾರ್ಥಕ ಬದುಕು ಸಾಗಿಸಬೇಕು ಎಂದರು.
ಬೇವಿನಕೊಪ್ಪ ವಿಜಯಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ‘ಆದಿಶಕ್ತಿ ಅವತಾರಿ ಆಗಿರುವ ಮಹಾಯೋಗಿನಿ ಅನುಸೂಯಾ ಮಾತಾಜಿ ಅವರು ಮಾನವರ ಉದ್ಧಾರಕ್ಕೆ ಜನಿಸಿದ ಮಹಾಮಾತೆಯಾಗಿದ್ದಾರೆ. ಕೊರೊನಾದಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡ ಜನರ ಆರೋಗ್ಯದ ಹಿತಕ್ಕಾಗಿ ತಮ್ಮ ಮಂತ್ರ ಶಕ್ತಿಯಿಂದ ತಯಾರಿಸಿದ ವಿಶೇಷ ನೀರು ಕುಡಿದವರಿಗೆ ಇದುವರೆಗೆ ಯಾರಿಗೂ ಕೊರೊನಾ ತಗುಲಿಲ್ಲ. ಇದು ಸತ್ಯ ಕೂಡ ಆಗಿದೆ. ಇನ್ನೆರಡು ದಿನ ಅವರು ಆಶ್ರಮದಲ್ಲಿ ಭಕ್ತರಿಗೆ ಲಭ್ಯವಾಗಲಿದ್ದಾರೆ. ಅವರ ದರ್ಶನ ಪಡೆದು ಮಂತ್ರಾಕ್ಷತೆಯ ನೀರು ಪಡೆಯುವಂತೆ ತಿಳಿಸಿದರು.
ಮಹಾಯೋಗಿ ರವಿ ಮಹಾರಾಜ, ಭಕ್ತರು ಇದ್ದರು.