ರಾಣೆಬೆನ್ನೂರ

ಅಧರ್ಮ ಎದ್ದಾಗ ಧರ್ಮ ಜಾಗೃತವಾಗುತ್ತದೆ: ಡಾ. ಚನ್ನಮಲ್ಲಿಕಾರ್ಜುನ ಶ್ರೀ

ಅಧರ್ಮ ಎದ್ದಾಗ ಧರ್ಮ ಜಾಗೃತವಾಗುತ್ತದೆ: ಡಾ. ಚನ್ನಮಲ್ಲಿಕಾರ್ಜುನ ಶ್ರೀ

ರಾಣಿಬೆನ್ನೂರ 29:  ಒಳ್ಳೆಯ ಕಾರ್ಯ ಮಾಡುವವರಿಗೆ ಒಳ್ಳೆಯ ಗೌರವವಿದೆ. ಅಧರ್ಮ ಎದ್ದಾಗ ಧರ್ಮ ಜಾಗೃತವಾಗುತ್ತದೆ. ಒಳ್ಳೆಯವರಂತೆ ನಟಿಸಿ ಜನರ ಮನಸ್ಸನ್ನು ಗೆಲ್ಲಬಹುದು. ಆದರೆ ದೇವರ ಕಣ್ಣಿಗೆ ಮಣ್ಣೆರಚಲು ಸಾಧ್ಯವಿಲ್ಲ ಎಂದು ಹೊನ್ನಾಳಿ ಹಿರೇಕ್ಮಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿಗಳು ಹೇಳಿದರು.  

ಇಲ್ಲಿನ ಚನ್ನೇಶ್ವರ ಮಠದಲ್ಲಿ 272 ನೇ ಜ್ಞಾನ ವಾಹಿನಿ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸಾಧ್ಯವಾದಷ್ಟು ನಾವು ಜನರಿಗೆ ಸಹಾಯ ಮಾಡಬೇಕು. ದೇವರು ಭಕ್ತಿ, ಶ್ರದ್ಧೆ, ಶಿಸ್ತು, ಒಳ್ಳೆಯ ನಡತೆ, ಸೇವಾ ಮನೋಭಾವಕ್ಕೆ ಒಲಿಯುತ್ತಾನೇಯೇ ಹೊರತು ತೋರಿ​‍್ಡಕೆ ಭಕ್ತಿಗೆ ಒಲಿಯುವುದಿಲ್ಲ ಎಂದರು.  

ಅಯೋಧ್ಯಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಬೇಕೆಂದು ಎಂದು ಅಸಂಖ್ಯಾತ ಹಿಂದುಗಳ ಕನಸಾಗಿತ್ತು ಅದಕ್ಕೋಸ್ಕರ ಸಾಕಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಇಂದು ಆ ಕನಸು ನನಸಾಗಿದೆ. ಶ್ರೀರಾಮ ಪ್ರತಿಯೊಬ್ಬ ಹಿಂದೂಗಳ ಉಸಿರಿನಲ್ಲಿ ಬೆರೆತಿದ್ದಾನೆ. ರಾಮನ ಪಿತೃವಾಕ್ಯ ಪರಿಪಾಲನೆ, ತಾಳ್ಮೆ, ಭಕ್ತಿ, ಏಕಪತ್ನಿ ವೃತಸ್ತ, ಸೇವೋಮನೋಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ಈ ದೇಶ ರಾಮರಾಜ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು ಶ್ರೀಗಳು ನುಡಿದರು.  

ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾಽ ಬಸವರಾಜ ಕೆಲಗಾರ ಮತ್ತು ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ ಪೂಜಾರ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದರು.   ಕನವಳ್ಳಿಯ ನಿವೃತ್ತ  ಪ್ರಾಚಾರ್ಯ ಶಿವಾನಂದಯ್ಯ ಚರಂತಿಮಠ, ಚಂದ್ರಶೇಖರ ರಾಮಾಳದ, ಬಸವರಾಜ ಪಟ್ಟಣಶೆಟ್ಟಿ, ಉಮೇಶಣ್ಣ ಗುಂಡಗಟ್ಟಿ, ಬಿದ್ದಾಡಪ್ಪ ಚಕ್ರಸಾಲಿ, ಭಾಗ್ಯಮ್ಮ ಗುಂಡಗಟ್ಟಿ, ಗಾಯತ್ರಮ್ಮ ಕುರವತ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ