ಡಾ.ಆರ್. ಎಂ.ಕುಬೇರಪ್ಪ ಅವರ ಹೋರಾಟಗಾರ ಅಭಿನಂದನಾ ಗ್ರಂಥ ಬಿಡುಗಡೆ
ರಾಣೇಬೆನ್ನೂರು 19: ಬಿಎಜೆಎಸ್ಎಸ್ ಮಹಿಳಾ ಕಾಲೇಜು ಗಾಯಿತ್ರಿ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ.22ರಂದು ರವಿವಾರ ಮುಂಜಾನೆ 10.30 ಗಂಟೆಗೆ ಡಾ. ಆರ್.ಎಂ.ಕುಬೇರಪ್ಪ ಅವರ ಅಭಿಮಾನಿ ಬಳಗವು, ಡಾ . ಕುಬೇರಪ್ಪ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವು ಆಯೋಜಿಸಿದೆ.
ಅಭಿನಂದನಾ ಗ್ರಂಥ " ಹೋರಾಟಗಾರ " ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ : ಚಂದ್ರಶೇಖರ ಕಂಬಾರ ಅವರು ಲೋಕಾರ್ಪಣೆಗೊಳಿಸುವರು.
ಮತ್ತು ಡಾ:ಕುಬೇರಪ್ಪ ಅವರ, ಕವನ, ಶಾಯರಿ, ಕಥೆಗಳ ಸಂಕಲನವು, ಶಿವಮೊಗ್ಗ ಕುವೆಂಪು ವಿ. ವಿ. ಕುಲಪತಿ ಡಾ:ಬಿ. ಪಿ. ವೀರಭದ್ರಪ್ಪ ಬಿಡುಗಡೆ ಮಾಡುವರು. ಗೊಟಗೋಡಿ ಜಾನಪದ ವಿ.ವಿ. ಕುಲಪತಿ ಡಾ.ಟಿ.ಎಂ. ಭಾಸ್ಕರ ಅವರು" ಸ್ವರ ಮೇಳ " ಬಿಡುಗಡೆಗೋಳಿಸುವರು.
ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು ಪಾಲ್ಗೊಳ್ಳುವರು.
ಪ್ರೊ:ಮಾರುತಿ ಸಿಡ್ಲಾಪುರ ಮತ್ತು ಡಾ: ಕಾಂತೇಶ ಗೋಡಿಹಾಳ ಅವರು ಪುಸ್ತಕ ಪರಿಚಯಿಸುವರು. ನಂತರ ಕಲಾವಿದರಾದ ಡಾ .ಕೆ.ಸಿ.ನಾಗರಜ್ಜಿ ಮತ್ತು ಸೌಮ್ಯ ಕೆಂಪಣ್ಣನವರ ಅವರ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಅಭಿಮಾನಿ ಬಳಗವು ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ