ಕಡಿಮೆಯಾದ ಮಳೆ: ನಿಟ್ಟುಸಿರು ಬಿಟ್ಟ ಜನ
ಬನವಾಸಿ: ಮಳೆ ಕಡಿಮೆಯಾದ ಕಾರಣ ವರದಾ ನದಿ ಪಾತ್ರದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ವರದಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದರಿಂದ ಹಾಗೂ ಕೆರೆ ಹಳ್ಳಗಳು ತುಂಬಿದರಿಂದ ಅನೇಕ ಸೇತುವೆಗಳು ಮುಳುಗಡೆಯಾಗಿದ್ದವು. ಕಳೆದ ಏರಡು ದಿನಗಳಿಂದ ಮಳೆ ಸಂಪೂರ್ಣ ಕಡಿಮೆಯಾಗಿ ಸಂಚಾರಕ್ಕೆ ಲಭ್ಯವಾಗಿದೆ.
ಅದರೆ ಕೃಷಿ ಭೂಮಿಗಳಿಗೆ ನುಗ್ಗಿರುವ ಪ್ರವಾಹದ ನೀರು ಇನ್ನು ಇಳಿಕೆ ಕಂಡಿಲ್ಲ. ವರದಾ ನದಿಯ ಪ್ರವಾಹ ಇಳಿಯಲು ಇನ್ನು ನಾಲ್ಕರಿಂದ ಐದು ದಿನಗಳೇ ಬೇಕು. ಮಳೆಯ ಅಬ್ಬರ ಕಡಿಮೆಯಾಗಿದ್ದರಿಂದ ಆಗಬಹುದಾದ ಗಂಡಾಂತರ ತಪ್ಪಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.