ವೀರ ಸಂಗೊಳ್ಳಿ ರಾಯಣ್ಣನ ವೀರ ಜ್ಯೋತಿಗೆ ಭವ್ಯ ಸ್ವಾಗತ
ಚಿಕ್ಕೋಡಿ: ಸಂಗೊಳ್ಳಿ ರಾಯಣ್ಣ ಉತ್ಸವ ನಿಮಿತ್ಯ ಚಿಕ್ಕೋಡಿಗೆ ಆಗಮಿಸಿದ ವೀರ ಸಂಗೋಳ್ಳಿ ರಾಯಣ್ಣನ ವೀರ ಜ್ಯೋತಿಗೆ ಇಲ್ಲಿನ ತಾಲೂಕಾಡಳಿತ ಭವ್ಯವಾಗಿ ಸ್ವಾಗತಿಸಿಕೊಂಡಿತ್ತು.
ನಿಪ್ಪಾಣಿ ಮಾರ್ಗವಾಗಿ ಚಿಕ್ಕೋಡಿ ನಗರಕ್ಕೆ ಆಗಮಿಸಿದ ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ತಹಶೀಲ್ದಾರ ಸಿ.ಎಸ್.ಕುಲಕರ್ಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಪುರಸಭೆ ಅಧ್ಯಕ್ಷ ಪ್ರವಿಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಮುಖ್ಯಾಧಿಕಾರಿ ಡಾ,ಸುಂದರ ರೋಗಿ ವೀರಜ್ಯೋತಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ಸಂಗೊಳ್ಳಿ ರಾಯಣ್ಣನ ಕುರಿತು ಮಾತನಾಡಿದ ಸಂಪಾದನ ಸ್ವಾಮೀಜಿ, ಸ್ವಾತಂತ್ರ್ಯ ಹೋರಾಟನಾಗಿ ಕಿತ್ತೂರ ಸಂಸ್ಥಾನ ಉಳಿಸಲು ತಾಯಿ ಚೆನ್ನಮ್ಮನ ಬಲಗೈ ಬಂಟನಾದ ವೀರ, ಸೂರನಾಗಿದ್ದ ರಾಯಣ್ಣನ ಆದರ್ಶ, ವ್ಯಕ್ತಿತ್ವ ಇಂದಿನ ಯುವ ಪೀಳಿಗೆಗೆ ತಿಳಿಸಲು ಸರ್ಕಾರ ವೀರಜ್ಯೋತಿ ಆರಂಭಿಸಿದೆ ಎಂದರು.
ವೀರಜ್ಯೋತಿ ವಿವಿಧ ವಾಧ್ಯದೊಂದಿಗೆ ನಗರದ ವಿವಿಧ ಕಡೆ ಮೆರವಣಿಗೆ ನಡೆಯಿತು.
ನ್ಯಾಯವಾದಿ ಎಚ್.ಎಸ್.ನಸಲಾಪೂರೆ, ವಿಶ್ವನಾಥ ಕಾಮಗೌಡ, ಸಂತೋಷ ಟವಳೆ, ಸೋಮು ಗವನಾಳೆ, ಸಿದ್ದಪ್ಪ ಡಂಗೇರ, ನಾಗರಾಜ ಮೇಧಾರ, ಟಿಎಚ್ಒ ಡಾ, ವಿಠ್ಠಲ ಶಿಂಧೆ, ಬಿಇಒ ಪಿ.ಬಿ.ಹಿರೇಮಠ, ಸಿಪಿಐ ಆರ್.ಆರ್.ಪಾಟೀಲ, ಎಸ್.ಎಂ.ಗಂಧ, ಮಹಾದೇವ ಕವಲಾಪೂರೆ, ಪ್ರಕಾಶ ಲಂಗೋಟೆ ಮುಂತಾದವರು ಇದ್ದರು.