ಹಣ್ಣು, ತರಕಾರಿ, ಮಾಂಸಕ್ಕೆ ನಗರಸಭೆ ದರ ನಿಗದಿ
ಕಾರವಾರ 29: ಲಾಕ್‌ಡೌನ್ ಸಂಧರ್ಭದಲ್ಲಿ ವ್ಯಾಪಾರಸ್ಥರು ಹಣ್ಣು, ತರಕಾರಿ, ಚಿಕನ್, ಮಟನ್ ದರವನ್ನು ಅನಗತ್ಯವಾಗಿ ಹೆಚ್ಚಿಸುತ್ತಿರುವ ದೂರುಗಳ ಕೇಳಿ ಬಂದ ಕೇಳಿ ಹಿನ್ನೆಲೆಯಲ್ಲಿ, ನಿಗದಿತದರ ಪಟ್ಟಿ ಸಿದ್ಧಪಡಿಸಿ, ದರಪಟ್ಟಿಯಂತೆಯೇ ವ್ಯಾಪಾರ ಮಾಡಬೇಕೆಂದು ಕಾರವಾರ ನಗರಸಭೆಯ ಪೌರಾಯುಕ್ತ ಆರ್.ಪಿ.ನಾಯ್ಕ ವ್ಯಾಪಾರಸ್ಥರಿಗೆ ಸೂಚಿಸಿದ್ದಾರೆ.
ನಗರಸಭೆ ಸಿದ್ಧಪಡಿಸಿದ ದರಪಟ್ಟಿ ಈ ಕೆಳಗಿನಂತಿದೆ
ತರಕಾರಿ: ಟೊಮೆಟೊ ಪ್ರತಿ ಒಂದು ಕೆಜಿಗೆ 30-40ರೂ, ಕ್ಯಾಬೆಜ್-30, ತೊಂಡೆಕಾಯಿ-60, ಬೀಟ್-40, ಕ್ಯಾಪ್ಸಿಕಮ್-60, ಹಸಿಮೆಣಸು-80, ಪ್ಲವರ್-50, ಬೇಂಡೆಕಾಯಿ-80, ಚವಳಿ-60, ಬದನೇಕಾಯಿ-60, ಸೌತೆಕಾಯಿ-50, ನವಲ ಕೋಸು-60, ಬಟಾಟೆ-30, ಈರುಳ್ಳಿ-25, ಬಿನ್ಸ್-120, ಕ್ಯಾರಟ್-60, ಬೆಳ್ಳುಳ್ಳಿ-150, ಶುಂಠಿ-100, ಹಾಗಲಕಾಯಿ-80, ಒಂದುಕಟ್ಟು ಕೊತ್ತಂಬರಿ -30, ಪುದಿನಾ-10. ಒಂದು ಡಜನ್ ಲಿಂಬು-80, ಒಂದು ನುಗ್ಗೆಕಾಯಿ-5 ಆಗಿರುತ್ತದೆ.
ಚಿಕನ್, ಮಟನ್, ಮೊಟ್ಟೆದರ: ಒಂದು ಡಜನ್ ಮೊಟ್ಟೆ-55ರೂ, ಒಂದು ಕೆಜಿ ಚಿಕನ್-190-200, ಮಟನ್-700-750 ಆಗಿರುತ್ತದೆ
ಹಣ್ಣುಗಳ ದರ: ಒಂದು ಕೆಜಿ ಸೇಬು-200-240ರೂ, ಮೊಸಂಬಿ-120, ಸಂತ್ರಾ-160, ದ್ರಾಕ್ಷಿ-120, ಕಲಂಗಡಿ-30, ಮಿಟಗಾ ಬಾಳೆಹಣ್ಣು-50, ಚಿಕ್ಕು-80, ಪಪ್ಪಾಯಿ-40, ಪೈನಾಪಲ್-40, ತರಬುಜ-40, ದಾಳಿಂಬೆ-180, ಮಾವಿನ ಹಣ್ಣು-60 ಆಗಿರುತ್ತದೆ
ಸಾರ್ವಜನಿಕರು ನಗರಸಭೆ ನಿಗದಿಪಡಿಸಿ ದರಕ್ಕಿಂತ ಹೆಚ್ಚಿನ ದರಕ್ಕೆ ವ್ಯಾಪರಸ್ಥರು ವ್ಯಾಪಾರ ಮಾಡಿದ್ದಲ್ಲಿ ನಗರಸಭೆ ಸಹಾಯವಾಣಿ ಸಂಖ್ಯೆ: 08382/222973 ಹಾಗೂ 9964490760ಗೆ ಸಂಪರ್ಕಿಸಿ ದೂರು ನೀಡಬಹುದು. ನಿಗದಿಪಡಿಸಿದ ಈ ದರದಲ್ಲಿ ಯಾವುದೇ ಬದಲಾವಣೆಯಾದಲ್ಲಿ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದೆಂದು ಪೌರಾಯುಕ್ತರು ತಿಳಿಸಿದ್ದಾರೆ.