ಯುಪಿಎಸ್ಸಿ ಪರಿಕ್ಷೇಯಲ್ಲಿ ರಾ್ಯಂಕ್: ಶೃತಿ ಯರಗಟ್ಟಿಗೆ ಸನ್ಮಾನ
ಯರಗಟ್ಟಿ 20: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಿ, ಉತ್ತಮ ಫಲಿತಾಂಶ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ರವಿವಾರ ಹಮ್ಮಿಕೊಂಡಿದ್ದ ಯುಪಿಎಸ್ಸಿ ಪರಿಕ್ಷೇಯಲ್ಲಿ ರಾ್ಯಂಕ ಪಡೆದ ಶೃತಿ ಯರಗಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಶಿಕ್ಷಣ, ಸಂಸ್ಕಾರ ಮೈಗೂಡಿಸಿಕೊಂಡು ಕಲಿಕೆ ಜೊತೆ ಸದೃಡ ಆರೋಗ್ಯ ಕಾಪಾಡಿಕೊಳ್ಳಬೇಕು. ಸ್ವಾತಂತ್ರ್ಯ ಹೊರಾಟಗಾರರ ವೀರರ ನಾಡಿನಲ್ಲಿ ಮತ್ತೆ ಅವರ ಕೀರ್ತಿ ಮುಗಿಲೆತ್ತರಕ್ಕೆ ಒಯ್ಯದಿದ್ದಾರೆ. ಇವರು ತಮ್ಮ ಸೇವಾ ಅವಧಿಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಹುದ್ದೆ ಅಲಂಕರಸಲಿ ಎಂದು ಶುಭಹಾರೈಸಿದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಯಶಸ್ಸು ಸಾಧಿಸಬೇಕಾದರೆ ನಿರಂತರ ಅಧ್ಯಯನ ಮತ್ತು ಪರಿಶ್ರಮ ಅತ್ಯಗತ್ಯ ಎಂದು ಹೇಳಿದರು.
ತೋರಗಲ್ಲಮಠದ ದೀಪಕ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಯುಪಿಎಸ್ ರಾ್ಯಂಕ ಪಡೆದ ಶೃತಿ ಯರಗಟ್ಟಿ, ಜಿಪಂ ಮಾಜಿ ಸದಸ್ಯ ರವೀಂದ್ರ ಯಲಿಗಾರ, ಪಕೀರ್ಪ ಹದ್ದನ್ನವರ, ಸವದತ್ತಿ ಬ್ಲಾಕ ಕಾಂಗ್ರೆಸ ಅಧ್ಯಕ್ಷ ಮಲ್ಲು ಜಕಾತಿ, ನಿವೃತ್ತ ಪಿಎಸ್ಐ ಆಯ್.ಎಸ್.ಚಿಕಾಕಿ, ಬಸಲಿಂಗಪ್ಪ ಕೊಪ್ಪದ, ಶಂಕರಗೌಡ ಪಾಟೀಲ, ಬ್ಲಾಕ ಕಾಂಗ್ರೆಸ ಮಾಜಿ ಅಧ್ಯಕ್ಷ ಮಹಾಂತೇಶ ಉಪ್ಪಿನ, ಮಲ್ಲಿಕಾರ್ಜುನ ಕುಲಮಗೇರಿ, ಬಸಪ್ಪ ಅಂಗಡಿ, ಬಸಪ್ಪ ರೊಕ್ಕದಕಟ್ಟಿ, ಬಂಗಾರೆಪ್ಪ ಹರಳಿ, ಮಲೀಕ ಭಾಗವಾನ, ಶಂಕರ ಹುಬ್ಬಳ್ಳಿ, ಎಮ್.ವಿ.ಉಪ್ಪಿನ ಸೇರಿದಂತನಿತರರು ಇದ್ದರು. ಉಮಾರೋಡ ತಲ್ಲೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.