ರಾಣೆಬೆನ್ನೂರ

ರಂಗ ಕುಸುಮ ಕಲಾಕೇಂದ್ರದ 18 ನೇ ವಾರ್ಷಿಕೋತ್ಸವ- ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ರಂಗ ಕುಸುಮ ಕಲಾಕೇಂದ್ರದ 18 ನೇ ವಾರ್ಷಿಕೋತ್ಸವ- ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ
ರಾಣೆಬೆನ್ನೂರು  ಅ 17 ಇಲ್ಲಿನ ವಾಗೀಶ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರವಿವಾರ ಮಧ್ಯಾಹ್ನ ರಂಗ ಕುಸುಮ ಕಲಾಕೇಂದ್ರದ 18 ನೇ ವಾರ್ಷಿಕೋತ್ಸವ, ಸಾಹಿತ್ಯ ಸಂಗಮ ರಂಗ ಸಂಭ್ರಮ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಂಗಕರ್ಮಿ, ಸಾಹಿತಿ ವೆಂಕಟೇಶ್ ಈಡಿಗರ ಅವರ ಶಿವಲೀಲಾಮೃತ  ಮತ್ತು ಸಂಕ್ರಾಂತಿ ಸಂಪ್ರೀತಿ ಪುಸ್ತಕಗಳನ್ನು ಸಾಹಿತಿಗಳಾದ, ವೆಂಕಟೇಶ್ ಕುಲಕರ್ಣಿ ಹಾಗೂ  ಗಣೇಶ್ ರಾವ್ ಅವರು ಲೋಕಾರ್ಪಣೆಗೊಳಿಸಿದರು. ಡಾ : ಶಿವಕುಮಾರ್ ಎಂ ಇ. ಹಾನಗಲ್ ನ ವಿಜಯಕಾಂತ ಪಾಟೀಲ, ಶಿವಾನಂದ್ ಸೊಂಡೂರ್  ಕೃತಿಕಾರ ವೆಂಕಟೇಶ ಈಡಿಗರ ಸೇರಿದಂತೆ, ನಾಡಿನ ನೂರಾರು ಕವಿಗಳು, ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು ಉಪಸ್ಥಿತರಿದ್ದರು.

ಸುದ್ದಿ ಓದಿ