ಅತಿವೃಷ್ಟಿ ಅಧ್ಯಯನ ತಂಡದಿಂದ ರಾಣೆಬೆನ್ನೂರು ತಾಲೂಕಗಳ ಕಡೆಗಣನೆ: ಆರೋಪ
ರಾಣೆಬೆನ್ನೂರು 11: ಅತಿವೃಷ್ಟಿ ಅಧ್ಯಯನಕ್ಕಾಗಿ ಬಂದಿರುವ ಕೇಂದ್ರ ಅಧ್ಯಯನ ತಂಡವು, ರಾಣೆಬೆನ್ನೂರು ತಾಲೂಕನ್ನು ಕಡೆಗಣಿಸಿದ್ದು, ಕಾರಣ ಜಿಲ್ಲಾಡಳಿತ ಒಳ ಸಂಚೆ ಪ್ರಮುಖ ಕಾರಣವಾಗಿದೆ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು ಆರೋಪಿಸಿದ್ದಾರೆ. ಶನಿವಾರ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಹಾವೇರಿ ಜಿಲ್ಲೆಗೆ ಕೇಂದ್ರ ದಿಂದ ಬಂದ ಅತಿವೃಷ್ಟಿ ಅಧ್ಯಯನ ತಂಡವು ಮಳೆಯಿಂದ ಹಾನಿಯಾದ ಪ್ರದೇಶಗಳ ವೀಕ್ಷಣೆ ಮಾಡಿದೆ, ವರದಿಯು ಸಹ ಕೇಂದ್ರಕ್ಕೆ ಕಳಿಸಿಕೊಟ್ಟಿದೆ. ಆದರೆ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋದ ರೈತರಿಗೆ ನ್ಯಾಯ ಕೊಡಿಸಬೇಕಾದ ತಂಡ ತಾಲೂಕನ್ನು ಸರಿಯಾಗಿ ಪರಿಗಣಿಸಿದೆ, ನಾಮಕಾವಾಸ್ತೆ, ನೆಪಮಾತ್ರಕ್ಕೆ ಕೆಲವೇ ನಿಮಿಷಗಳ ವೀಕ್ಷಣೆ ಕಾರ್ಯ ಮಾಡಿದೆ ಎಂದು ಆರೋಪಿಸಿದ್ದಾರೆ. ರೈತ ಸಂಘಟನೆಗಳಿಗೆ ಗೊತ್ತಾಗದ ಹಾಗೆ, ವೀಕ್ಷಣಾ ಸ್ಥಳವನ್ನು ಗುಪ್ತ ಗುಪ್ತ ವಾಗಿಟ್ಟು, ಪರೀಶೀಲನಾ ಕಾರ್ಯ ನಾಟಕವಾಡಿದ್ದಾರೆ. ತಮಗೆ ಬೇಕಾದ ಪ್ರದೇಶಗಳಿಗೆ ಮಾತ್ರ ಅಧ್ಯಯನ ತಂಡವನ್ನು ಕರೆದುಕೊಂಡು ಹೋಗಿ, ನಿಜವಾದ, ಬಹು ಹಾನಿಗೊಂಡ ರೈತರಿಗೆ ವಂಚಿಸಿದ್ದಾರೆ ಎಂದು ತಮ್ಮ ಕಿಡಿಕಾರಿದ್ದಾರೆ. ಜಿಲ್ಲಾಡಳಿತದ ಅನುಸರಿಸಿದ ಕ್ರಮ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಕೂಡಲೇ ಪುನಃ ಅಧ್ಯಯನ ತಂಡವನ್ನು ಕರೆಸಿ, ಪರೀಶೀಲನಾ ಕಾರ್ಯವು ಮಾಡಬೇಕು ಎಂದು ಆಗ್ರಹಿಸಿದ್ದಾರೆ