ರಾಣೆಬೆನ್ನೂರ

ರಾಣೆಬೆನ್ನೂರ ಕಾ ರಾಜ ಬೃಹತ್ ಶೋಭಾಯಾತ್ರೆ : ದಶಾವತಾರ ಪ್ರದರ್ಶನ

ರಾಣೆಬೆನ್ನೂರ  ಕಾ ರಾಜ ಬೃಹತ್ ಶೋಭಾಯಾತ್ರೆ : ದಶಾವತಾರ ಪ್ರದರ್ಶನ

ರಾಣೆಬೆನ್ನೂರು 19:  ನಗರದ ವಂದೇಮಾತರಂ ಸ್ವಯಂ ಸೇವಾ ಸಂಸ್ಥೆಯು, ಕಳೆದ 14 ವರ್ಷಗಳಿಂದ  ವಿವಿಧ ರೂಪದಲ್ಲಿ ಬೃಹದಾಕಾರದ, ಧಾರ್ಮಿಕ ಭಾವನೆಯ ಸಂದೇಶ ಸಾರುವ ಗಣೇಶ ನನ್ನು ಪ್ರತಿಷ್ಠಾಪಿಸುವುದರ ಮೂಲಕ, ಸಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ ಹೇಳಿದರು.ಅವರು ನಗರಸಭಾ ಕ್ರೀಡಾಂಗಣದ ದಶಾವತಾರ ಗಣೇಶೋತ್ಸವ ಮಂಟಪದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿ ಮಹಾಮಂಟಪದಲ್ಲಿ ಲೋಕಕಲ್ಯಾಣಾರ್ಥ ಶ್ರೀ ವಿಷ್ಣು ಭಗವಂತನು ಅವತರಿಸಿದ ದಶಾವತಾರ ಮಹಾ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ.  

28ರಂದು ಶೋಭಾಯಾತ್ರೆಯ ಮೂಲಕ, ಅದ್ದೂರಿ ಮೆರವಣಿಗೆ ನಡೆಸಿ, ರಾತ್ರಿ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಗುವುದು ಎಂದರು. ದಶಾವತಾರ ವೀಕ್ಷಿಸಲು ಜಿಲ್ಲೆಯೂ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ನಿತ್ಯವೂ ಹತ್ತಾರುಸಾವಿರ ನಾಗರಿಕರು ಬರುತ್ತಿರುವುದು ಕಾರ್ಯಕ್ರಮ ಸಂಘಟಕರಿಗೆ ಸಂತೋಷ ನೀಡಿದೆ. ಮೆರವಣಿಗೆಯಲ್ಲಿ  ವಿಶೇಷ ಆಕರ್ಷಣೆಯಾಗಿ, ಕೇರಳದ ವಿಶೇಷ ಕಲಾತಂಡಗಳು, ಜಾನಪದ ಕಲಾ ವಾದ್ಯಮೇಳಗಳು, ಡೊಳ್ಳು, ಕೋಲಾಟ, ಸಮಾಳ ವಾದ್ಯಗಳು, ಹಲಗೆ ಮೇಳ, ನಂದಿಕಂಬ, ಕೋಲು ಕುಣಿತ, ಅಣುಕು ಗೊಂಬೆಗಳು, ಭಜನೆ, ಝಾಠ್, ಹುಲಿ ಕುಣಿತ, ಪೂಜಾ ಕುಣಿತ,ಚೆಂಡೆಮದ್ದಳೆ, ಯಕ್ಷಗಾನ, ವೀರಗಾಸೆ ಮೊದಲಾದ ವಾದ್ಯ ತಂಡಗಳು ಭಾಗವಹಿಸಲಿವೆ ಎಂದರು. ಮಹಿಳೆಯರು ಮಕ್ಕಳು ಮತ್ತು ಪುರುಷರಿಗಾಗಿ, ಪ್ರತ್ಯೇಕ ಆನ್ಲೈನ್ ಡಿಜೆ ವ್ಯವಸ್ಥೆಗೊಳಿಸಲಾಗಿದೆ ಎಂದು ವಿವರಿಸಿದ ಪ್ರಕಾಶ್ ಅವರು, ಸಾರ್ವಜನಿಕರ ಸಹಕಾರವಿದ್ದರೆ ವೈವಿಧ್ಯಮಯವಾಗಿ, ವಿಶೇಷ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಉದ್ದೇಶ ನಮ್ಮ ಸಂಸ್ಥೆಯದ್ದಾಗಿದೆ ಎಂದರು.  

ಸೆಪ್ಟಂಬರ್ 25ರಂದು ಮುಂಜಾನೆ 11ಗಂಟೆಯಿಂದ ಸಾರ್ವಜನಿಕವಾಗಿ ಅನ್ನಸಂತರೆ​‍್ಣ, ಮತ್ತು 26ರಂದು  ಸ್ವಯಂ ಪ್ರೇರಣ ರಕ್ತದಾನ ಶಿಬಿರ, ಅಂದೇ ಸಂಜೆ   ನಾಡಿನ ಹೆಸರಾಂತ ಕಲಾವಿದರಿಂದ ಹಾಸ್ಯ, ನೃತ್ಯ  ಮತ್ತು ಸಂಗೀತ ಕಾರ್ಯಕ್ರಮ, ವಿದ್ವಾಂಸರಿಂದ  ವಿಶೇಷ ಉಪನ್ಯಾಸಗಳು ಆಯೋಜಿಸಲಾಗಿದೆ, ಮತ್ತು  ವಿಜ್ಞಾನ ಮತ್ತು ಸನಾತನ ಧರ್ಮ ಕುರಿತು ಎಂ.ಎಸ್‌. ರಾಘವೇಂದ್ರ, ಭಗವದ್ಗೀತೆ ಮತ್ತು ಅವಶ್ಯಕತೆ ಇಸ್ಕಾನ್ ಮಂದಿರದವರಿಂದ, ಹಾಗೂ ಇತಿಹಾಸವನ್ನು ಹೇಗೆ ತಿರುಚಿದ್ದಾರೆ, ರೋಹಿತ್ ಚಕ್ರವರ್ತಿ ಉಪನ್ಯಾಸ ನೀಡುವರು. ಸಂಗೀತ ಸಂಜೆಯಲ್ಲಿ ಹನುಮಂತ ಲಮಾಣಿ, ಕಂಬದ ರಂಗಯ್ಯ, ನಾದಿರಾ ಬಾನು, ಸುಹಾನಾ ಸೈಯದ್, ಅಶ್ವಿನ್ ಶರ್ಮ, ನಯನಾ, ಸೂರ್ಯ ಕುಂದಾಪುರ, ಮತ್ತಿತರರು ಪಾಲ್ಗೊಳ್ಳುವರು ಎಂದರು ಮಾಧ್ಯಮಗೋಷ್ಟಿಯಲ್ಲಿ, ಗಣ್ಯರಾದ ಹುಚ್ಚಪ್ಪ ಮೆಡ್ಲೇರಿ, ನಾಗರಾಜ್ ಅಜ್ಮನಿ, ಸೇರಿದಂತೆ  ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು 


ಸುದ್ದಿ ಓದಿ