ರಂಜಾನ್ ಹಬ್ಬ: ಮುಸ್ಲಿಂ ಸಮುದಾಯದ ಮುಖಂಡರ ಸಭೆ
ಘಟಪ್ರಭಾ 07: ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಮುಖಂಡರ ಸಭೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ರವಿವಾರ ಕರೆಯಲಾಗಿತ್ತು.
ಪಿ. ಐ ಬಸವರಾಜ ಕಾಮನಬೈಲು ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಂದ್ರನ ದರ್ಶನ ನಂತರ ಹಬ್ಬದ ದಿನವನ್ನು ನಿರ್ಧರಿಸಲಾಗುವುದು ಚಂದ್ರ ಮಂಗಳವಾರ ಕಂಡರೆ ಬುಧವಾರ ಇಲ್ಲವಾದರೆ ಗುರುವಾರ ಹಬ್ಬ ಆಚರಿಸಲು ನಿರ್ಧರಿಸಲಾಯಿತು.
ಮುಸ್ಲಿಂ ಸಮುದಾಯದ ಹಿರಿಯರಾದ ಶೌಕತ ಕಬ್ಬೂರ, ದಾದಾಪೀರ ಶಾಬಾಜಖಾನ, ಹಜರತಸಾಬ ಕಬ್ಬೂರ, ಅಬ್ದುಲ ಪೇಡಾರಿ, ಮೋದಿನಸಾಬ ಕಬ್ಬೂರ, ಮಾಜಿ ಸದಸ್ಯರಾದ ಸಲೀಮ ಕಬ್ಬೂರ, ದಿಲಾವರ ನಧಾಪ, ಮದಾರ ನಾಲಬಂದ, ರಜಾಕ ಚೌಧರಿ, ಅಬ್ದುಲ ಬೇಪಾರಿ, ಸುಬಾನಿ ಕಬ್ಬೂರ, ಮಹಮ್ಮದ ಕಬ್ಬೂರ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು ಉಪಸ್ಥಿತರಿದ್ದರು.