ಸಾರ್ವಜನಿಕ ಆಸ್ಪತ್ರೆಗೆ ರಾಮಚಂದ್ರ ಗಡದೆ ಭೇಟಿ: ಪರೀಶೀಲನೆ
ಇಂಡಿ: ಇಂಡಿ ತಾಲ್ಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಅಂಗವಿಕಲರ ಶಿಬಿರದಲ್ಲಿ ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಮಂಗಳವಾರ ಭೇಟಿ ನೀಡಿ ಪರೀಶೀಲಿಸಿದರು.
ಅಂಗವಿಕಲರಿಗೆ ತೊಂದರೆಯಾಗದಂತೆ, ಕೂಡಲೇ ಅವರ ಕಾರ್ಯ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ವೈದ್ಯರಿಗೆ ಸೂಚಿಸಿದರು.
ತಾಲ್ಲೂಕಿನ ನೂರಾರು ಅಂಗವಿಕಲರು ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಅಂಗವೈಫಲ್ಯದ ಪ್ರತಿಶತ ಕಾರ್ಡಗಳನ್ನು ಪಡೆದುಕೊಂಡರು.
ಮದ್ಯಾಹ್ನವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಂಗವಿಕಲರು ಆಸ್ಪತ್ರೆಗೆ ಆಗಮಿಸುತ್ತಿರುವುದನ್ನು ಗಮನಿಸಿದ ತಾ ಪಂ ಇಓ ಸುನೀಲ ಮದ್ದಿನ್ ತಮ್ಮ ಇಲಾಖೆಯ 8 ಜನ ಆಪರೇಟರ್ಗಳನ್ನು ಲ್ಯಾಪ್ಟಾಪ್ ಸಮೇತ ಕರೆಯಿಸಿಕೊಂಡು 8 ವಿಭಾಗಗಳಾಗಿ ವಿಂಗಡಿಸಿ ಅಂಗವಿಕಲರಿಗೆ ಬೇಗನೆ ಸರದಿ ಬರುವ ವ್ಯವಸ್ಥೆ ಕಲ್ಪಿಸಿದರು. ಇಓ ಅವರ ಕಾರ್ಯಕ್ಕೆ ಎಸಿ ಗಡದೆ ಅವರು ಮೆಚ್ಚುಗೆ ಸೂಚಿಸಿದರು.
ಎಲುವು ಕಿಲುಬು ತಜ್ಞರು, ಚಿಕ್ಕಮಕ್ಕಳ ತಜ್ಞರು, ನೇತ್ರ ತಜ್ಞರು, ಫಿಜಿಶಿಯನ್, ಸರ್ಜನ್ ಅವರು ಸಂಬಂದಪಟ್ಟ ಫಲಾನುಭವಿಗಳಿಗೆ ತಪಾಸಣೆ ಮಾಡಿ ಅವರ ಅಂಗವೈಕಲ್ಯಕ್ಕೆ ಅನುಗುಣವಾಗಿ ಫಲಿತಾಂಶ ಮಾಡಿಕೊಟ್ಟರು.
ಜಿಲ್ಲಾ ಆರೋಗ್ಯ ಇಲಾಖೆಯ ಡಾ. ಸಂಪತ್ ಗುಣಾರಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ, ವೈದ್ಯಾಧಿಕಾರಿ ಡಾ. ರಾಜೇಶ ಕೋಳೆಕರ್, ಡಾ.ವಿಪುಲ್ ಕೋಳೇಕರ್, ಡಾ. ಅಮಿತ್ ಕೋಳೆಕರ್, ಅಂಗವಿಕಲ ಕ್ಷೇಮಾಬಿವೃಧ್ಧಿ ಅಧಿಕಾರಿಗಳು ಹಾಗೂ ಸಂಯೋಜಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಕಿವುಡ ಮತ್ತು ಮೂಕ ಮಕ್ಕಳಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿ ಅವರ ಅಂಗವೈಕಲ್ಯ ಪ್ರತಿಶತ ಆದೇಶ ನೀಡಲಾಗುತ್ತದೆ. ಬುಧವಾರವೂ ಸಹ ನಮ್ಮ ಆಸ್ಪತ್ರೆಯಲ್ಲಿ ಅಂಗವಿಕಲರ ಶಿಬಿರ ಇರುತ್ತದೆ. ಅಂಗವಿಕಲರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಡಾಽಽ ರಾಜೇಶ್ ಕೋಳೆಕರ್ ಮುಖ್ಯ ವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಇಂಡಿ.