ಸದ್ಭಾವಣಾ ಪ್ರಶಸ್ತಿ ಪಡೆದ ರಾಮಚಂದ್ರ ಅಜ್ಜನಕಟ್ಟಿ
ನೇಸರಗಿ. ಇಲ್ಲಿನ ನಿವಾಸಿ ಹಾಗೂ ಚಿಕ್ಕೋಡಿ ಸಿ ಟಿ ಶಿಕ್ಷಣ ಸಂಸ್ಥೆಯ ಆರ್ ಎಂ ಬಾಲಿಕಾ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ರಾಮಚಂದ್ರ ಅಜ್ಜನಕಟ್ಟಿ ಇವರಿಗೆ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿ.8-10-23 ರಂದು ನಡೆದ ಜನಸ್ನೇಹಿ ಫೌಂಡೇಷನ್ ಕರ್ನಾಟಕ ಹಾಗೂ ಶ್ರೀ ನಿಧಿ ಫೌಂಡೇಷನ್ ಇವರು ಮಹಾತ್ಮಾ ಗಾಂಧಿ ಜಯಂತಿಯ ಪ್ರಯುಕ್ತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಕ್ಕಾಗಿ ಕೊಡಮಾಡುವ ಮಹಾತ್ಮಾ ಗಾಂಧಿ ಸದ್ಭಾವಣಾ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಠಾಧೀಶರು, ಶ್ರೀ ನಿಧಿ ಫೌಂಡೇಷನ್ ಪದಾಧಿಕಾರಿಗಳು,ವಿವಿಧ ಭಾಗಗಳ ಶಿಕ್ಷಕರು,ರೈತ ಮುಖಂಡರು ಭಾಗವಹಿಸಿದ್ದರು.