ತಲ್ಲೂರ ಮಾದರಿ ಶಾಲೆಯಲ್ಲಿ ರಕ್ಷಾಬಂಧನ
ಯರಗಟ್ಟಿ 02: ರಕ್ಷಾ ಬಂಧನ ವಿಶ್ವದಲ್ಲಿ ಭ್ರಾತೃತ್ವದ ಸಂಕೇತವಾಗಿ ಆಚರಿಸಲ್ಪಡುವ ಏಕೈಕ ಹಬ್ಬ. ಭಾರತೀಯ ಆಚರಣೆಗಳಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವಂತ ವಿಶೇಷ ಆಚರಣೆಯಾಗಿದೆ ಎಂದು ಯರಗಟ್ಟಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಯಶ್ರೀ ಅಕ್ಕನ್ನವರು ಮುಖ್ಯ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗುರುವಾರ ರಕ್ಷಾ ಬಂಧನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹೋದರಿ ಮತ್ತು ಸಹೋದರನ ನಡುವಿನ ಬಾಂಧವ್ಯದ ಸಂಕೇತವೇ ಈ ರಕ್ಷಾ ಬಂಧನ. ಸಹೋದರಿ ತಮ್ಮ ಸಹೋದರರ ದೀರ್ಘಾಯುಷ ಪ್ರಾರ್ಥಿಸುತ್ತಾಳೆ. ನಮ್ಮ ಭಾರತೀಯ ಪರಂರೆಯಲ್ಲಿ ಆಚರಿಸುವ ಇಂತಹ ಹಬ್ಬಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು.
ಮುಖ್ಯ ಶಿಕ್ಷಕ ಡಿ.ಡಿ.ಭೋವಿ, ಪಿ.ಎಸ್.ವಿಜಾಪೂರ, ಎಸ್.ಎಮ್.ಹಂಜಿ, ಎಸ್.ಎಮ್.ಮಾಳೈನವರ, ಎಸ್.ಎಫ್.ಮುರಗನ್ನವರ, ಆರ್.ಎಚ್.ಅತ್ತಾರ, ಎ.ಎ.ಮಾನೆ, ಎಂ.ಎ.ಬಸರಿಮರದ, ಅಶ್ವಿನಿ ಹಿರೇಮಠ, ಉಮಾ ಭೋವಿ, ಚನ್ನಮ್ಮ ತುಪ್ಪದ, ವಿಜಯಲಕ್ಷ್ಮೀ ಭಾವಿಕಟ್ಟಿ, ಆರ್.ಬಿ.ಅಣ್ಣಿಗೇರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.