ಸಿಂಧಗಿ

ರಾಜಯೋಗದಿಂದ ಒತ್ತಡದ ಜೀವನದಿಂದ ಮುಕ್ತರಾಗಲು ಸಾಧ್ಯ: ಪಾಟೀಲ

ರಾಜಯೋಗದಿಂದ ಒತ್ತಡದ ಜೀವನದಿಂದ ಮುಕ್ತರಾಗಲು ಸಾಧ್ಯ: ಪಾಟೀಲ

ಲೋಕದರ್ಶನ ವರದಿ 

ಸಿಂದಗಿ 22: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ಒತ್ತಡದ ಬದುಕಿನಲ್ಲಿ ಬಾಳುವುದು ಪರಿಪಾಠವಾಗಿದೆ. ಆದರೆ ಪ್ರಾಚೀನ ಕಾಲದ ರಾಜಯೋಗದಿಂದ ಒತ್ತಡದ ಜೀವನದಿಂದ ಮುಕ್ತರಾಗಲು ಸಾಧ್ಯ ಎಂದು ರಾಜಯೋಗಿ ಡಾ.ಬಾಳನಗೌಡ ಪಾಟೀಲ ಹೇಳಿದರು. 

       ಪಟ್ಟಣದ ಪ್ರಜಾಪೀತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಜಯೋಗದ ಕುರಿತು ಏಳು ದಿನದ ಮುಕ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿ. ಆದ್ಯಾತ್ಮದಿಂದ ಜೀವನ ಪಾವನವಾಗುತ್ತದೆ. ಎಂದರು. 

           ಈಶ್ವರೀಯ ಮುಖ್ಯ ಸಮಚಾಲಕಿ ಪವಿತ್ರಾಜೀ ಅಕ್ಕನವರು ಮಾತನಾಡಿ, ನಾವುಗಳು ನಿರಾಕಾರ ಶಿವತಂದೆಯ ಸಂತಾನವಾದ್ದರಿಂದ ನಾವುಗಳೆಲ್ಲರೂ ಒಂದೇ ತಂದೆ ಸಂತಾನವಾಗಿದ್ದವೆ. ನಮ್ಮಲಿ ಯಾವದೆ ತರಹದ ಬೇದವಾವಗಳು ಇರುವದಿಲ್ಲ. ಇಲ್ಲಿ ಸಿಗುವ ರಾಜಯೋಗದಿಂದ ಅಭ್ಯಾಸದಿಂದ ಮನಸಿನ ಮಲೀನತೆ. ನಕಾರತ್ಮಕ ಚಿಂತನೆಗಳು. ಭಯ.ಚಿಂತೆ.ಅತಿಯಾಗಿ ಯೋಚಿಸುವದು.ಮಾನಸಿಕ ಕಿನ್ನತೆ. ಮನೊವಿಕಾರತನ. ಈ ಎಲ್ಲವು ರಾಜಯೋಗದ ಅಭ್ಯಾಸದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ತಿಳಿಸಿದರು.  

        ನಿವೃತ್ತ ಕೃಷಿ ಅಧಿಕಾರಿ ಕೆ.ಎಸ್‌.ಪತ್ತಾರ ಮಾತನಾಡಿ, ಮನುಷ್ಯನ ಎಲ್ಲ ಕಶ್ಮಲಗಳನ್ನು ತೆಗೆದು ಹಾಕುವಲ್ಲಿ ಆಧ್ಯಾತ್ಮ ಕೇಂದ್ರದಿಂದ ಮಾತ್ರ ಕಾರಣ ನಾನು ಇಲ್ಲಿಯ ಆದ್ಯತ್ಮ ಕೆಂದ್ರಕ್ಕೆ ಬಂದು ಸುಮಾರು 30.ವರ್ಷವಾಯಿತು ಬಂದು  ಇದರ ಲಾಬವನ್ನು ಪಡದಿದ್ದೆನೆ ನಮ್ಮ ದಿನವಿಡಿ ಸಂವುಸಾರದ ಒತ್ತಡದಲ್ಲಿ ಎಷ್ಠೆ ಕೆಲಸವಿದ್ದರು ನಾನು ಇಲ್ಲಿ ನಡೆಯುವ ಆಧ್ಯ್ಯಾತ್ಮದ ಮುರಳಿಯನ್ನು ತಪ್ಪಿಸದೆ ನಾವುಗಳು ದಂಪತಿಗಳಿಬ್ಬರು ಕ್ಲಾಸಿಗೆ ಬರುತ್ತೇವೆ ಎಂದು ಅಭಿಮತ ವ್ಯಕ್ತ ಪಡಿಸಿದರು. 


ಸುದ್ದಿ ಓದಿ