ರಾಣೆಬೆನ್ನೂರ

ರಾಜ - ರಾಜೇಶ್ವರಿ ಕಾಲೇಜು: ಕೋಟಿ ಕಂಠ ಗಾಯನ

ರಾಜ - ರಾಜೇಶ್ವರಿ ಕಾಲೇಜು: ಕೋಟಿ ಕಂಠ ಗಾಯನ

ರಾಣೆಬೆನ್ನೂರು 30:  ನಾಡು ನುಡಿ ಭಾಷೆ ಸಂಸ್ಕೃತಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಕೆಎಲ್ಇ  ಶಿಕ್ಷಣ ಸಂಸ್ಥೆಯ ಸ್ಥಾನಿಕ  ಆಡಳಿತ ಮಂಡಳಿ ಸದಸ್ಯ ಬಸವರಾಜ ಪಟ್ಟಣಶೆಟ್ಟಿ ಹೇಳಿದರು. ಅವರು, ಶುಕ್ರವಾರ ಪ್ರೌಢಶಾಲಾ ಆವರಣದಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾವ್ಯ  ಮತ್ತು ಕಾವ್ಯ ಗಾಯನಕ್ಕೆ ವೇದ ಐತಿಹಾಸಗಳಿಂದಲೂ ಬಹುದೊಡ್ಡ ಪರಂಪರೆಯಿದೆ ಎಂದ ಅವರು, ಮಕ್ಕಳಲ್ಲಿ ಗಾಯನ ಪ್ರತಿಭೆ ಹೆಚ್ಚಿದಾಗ, ಶಿಕ್ಷಣದ ಜೊತೆ ಜೊತೆಗೆ  ಮಾನಸಿಕ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆ ಕಂಡು ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುವುದು ಎಂದರು. ಕಾಲೇಜು ಪ್ರಾಚಾರ್ಯ ನಾರಾಯಣ ನಾಯಕ್ ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲೆ ಸಾಹಿತ್ಯ ಸಂಗೀತ ಇವುಗಳಿಂದ  ಸಂಸ್ಕೃತಿ ನಿರ್ಮಾಣವಾಗಲಿದೆ.ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಗಾಯನ ಪರಂಪರೆಗೆ, ತಮ್ಮನ್ನೇ ತಾವು ವಡ್ಡಿಕೊಳ್ಳಬೇಕು ಎಂದು ಕರೆ ನೀಡಿದರು. ಪ.ಪು ಕಾಲೇಜು ಪ್ರಾಚಾರ್ಯ ಎಫ್ಎನ್ ಗುಡಿಕಟ್ಟಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ, ಶೋಭಾ ದೊಡ್ಡನಾಗಳ್ಳಿ, ಎನ್.ಎಸ್ ಎಸ್ ಅಧಿಕಾರಿ ವೀರೇಶ್ ಕುರಹಟ್ಟಿ, ಕೃಷ್ಣ ಎಲ್ ಎಚ್, ಡಾ.ಕವಿತಾ ಗಡ್ಡದ ಗೂಳಿ, ಮಂಜಪ್ಪ ಎಸ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು  ಅಧ್ಯಾಪಕರು, ಸಿಬ್ಬಂದಿ ಪಾಲ್ಗೊಂಡಿದ್ದರು. ಸಾವಿರಾರು ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಕಾವ್ಯ ಗಾಯನ ನಡೆದು, ಕಾಲೇಜು ಆವರಣ ರಿಂಗಣಿಸುವಂತಾಗಿತ್ತು 

ಸುದ್ದಿ ಓದಿ