ಉಪವಿಭಾಗಾಧಿಕಾರಿ ಅವರ ಕಂಪೌಂಡದೊಳ್ಳಗೆ ಮಳೆಯ ನೀರು
ಜಮಖಂಡಿ,24 : ನಗರದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರ ನಿವಾಸದ ಕಂಪೌಂಡದೊಳ್ಳಗೆ ಮಳೆಯ ನೀರು ನುಗ್ಗಿದ ಪರಿಣಾಮ ಪರದಾಡುವಂತ ಪರಿಸ್ಥಿತಿಯಾಗಿದ್ದು. ತಡರಾತ್ರಿಯಲ್ಲಿ ಭಾರಿ ಪ್ರಮಾಣದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ. ರಸ್ತೆಯಲ್ಲಿನ ಮಳೆಯ ನೀರು ಹಾಗೂ ಗಟಾರುಗಳು ತುಂಬಿ ಹರಿಯುತ್ತಿರುವ ನೀರು ಉಪವಿಭಾಗಾಧಿಕಾರಿಗಳ ಮನೆಯ ಅಂಗಳದಲ್ಲಿ ನೀರು ತುಂಬಿದ ಘಟನೆ ನಡೆದಿದೆ.
ಬೆಳಗಿನ ಜಾವದಲ್ಲಿ ನಗರಸಭೆಯ ಪೌರಕಾರ್ಮಿಕರು ಕಸದ ವಾಹನ ಹಾಗೂ ನೀರು ತುಂಬಿದ ಟ್ರ್ಯಾಕ್ಟರ್ ಟ್ಯಾಂಕ್ ತೆಗೆದುಕೊಂಡು ಬಂದು. ಉಪವಿಭಾಗಾಧಿಕಾರಿ ಅವರ ನಿವಾಸದಲ್ಲಿ ತುಂಬಿದ ಕಸದರಾಶಿ ಹಾಗೂ ಮಳೆಯ ನೀರು ಹೋಗುವಂತೆ ವ್ಯವಸ್ಥೆಯನ್ನು ಮಾಡಿದರು. ಸಾಕಷ್ಟು ಪ್ರಮಾಣದಲ್ಲಿ ಮಳೆಯ ನೀರಿನಲ್ಲಿ ಕಸದರಾಶಿ ಹರಿದು ಬಂದು ಆವರಣದಲ್ಲಿ ತುಂಬಿದ ಕೊಳಚೆ ಕಸವನ್ನು ನಗರಸಭೆಯ ಪೌರಕಾರ್ಮಿಕರು ಸ್ವಚ್ಚಗೊಳಿಸಿದರು.,