ರಾಣೆಬೆನ್ನೂರ

ಮಳೆ ಹಾನಿ: ಸಮಗ್ರ ಪರೀಶೀಲನೆಗೆ ಸಂತೋಷ ಪಾಟೀಲ ಸರ್ಕಾರಕ್ಕೆ ಮನವಿ

ಮಳೆ ಹಾನಿ: ಸಮಗ್ರ ಪರೀಶೀಲನೆಗೆ ಸಂತೋಷ ಪಾಟೀಲ ಸರ್ಕಾರಕ್ಕೆ ಮನವಿ

ರಾಣೇಬೆನ್ನೂರು 09: ತಾಲೂಕಿನಲ್ಲಿ ಮೂರು ದಿವಸಗಳಿಂದ ಬೀಸಿದ ಭಾರೀ ಬಿರುಗಾಳಿ ಮಳೆಗೆ ಅಲ್ಲಲ್ಲಿ ಬೆಳೆದ ಬೆಳೆಯ ಜೊತೆಗೆ ಮರ ಗಿಡಗಳು ಬಿದ್ದು ಹಾನಿ ಸಂಭವಿಸಿದ್ದು ಕೂಡಲೇ ತಾಲೂಕಾ ದಂಡಾಧಿಕಾರಿಗಳು ಸಮಗ್ರವಾಗಿ ಪರೀಶೀಲನೆ ನಡೆಸಿ ತಕ್ಷಣವೇ ಸೂಕ್ತ ಪರಿಹಾರವನ್ನು ರೈತ ಸಮುದಾಯಕ್ಕೆ ಮತ್ತು ಇತರೆ ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಯುವ ನಾಯಕ ಸಂತೋಷ ಪಾಟೀಲ ಅವರು ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ​‍್ಿಸಿದರು. 

ತಾಲೂಕಿನಾದ್ಯಂತ ಅಪಾರ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಅಧಿಕ ಪ್ರಮಾಣದಲ್ಲಿ ಭತ್ತದ ಬೆಳೆ ಹಾಗೂ ಇತರೆ ಬೆಳೆಗಳು ಹಾನಿಯಾಗಿವೆ. ತೆಂಗು, ಅಡಿಕೆ, ಮಾವು, ಬಾಳೆ, ರೇಷ್ಮೆ ಸೇರಿದಂತೆ ತೋಟಗಾರಿಕೆ ಬೆಳೆಗಳೂ ಸಹ ಸಂಪೂರ್ಣ ಹಾನಿಗೊಂಡಿದ್ದಲ್ಲದೆ, ಮನೆ ಚಾವಣಿ, ಗೋಡೌನ್, ಜಾನುವಾರುಗಳು ಸಹ ಹೊಡೆತಕ್ಕೆ ಸಿಲುಕಿರುವ ಪರಿಣಾಮ ರೈತರು ನಷ್ಟವನ್ನು ಅನುಭವಿಸಿದ್ದಾರೆ. ಬಡ ಜನರ ಪರಿಸ್ಥಿತಿ ಹೇಳಲಾರದಂತ ಸ್ಥಿತಿಯಾಗಿದೆ. ಕೂಡಲೇ ಪರೀಶೀಲಿಸಿ ಪರಿಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಈರಣ್ಣ ಬುಡಪನಹಳ್ಳಿ, ತಿಮ್ಮನಗೌಡ್ರ ಪಾಟೀಲ, ಚಂದ್ರ ನಾಯಕ್, ಉಮೇಶ್ ಬಾರ್ಕಿ, ವೀರೇಂದ್ರ ಪಾಟೀಲ, ದೇವರಾಜ ಗಂಗಾಪುರ, ವೀರು ಪಾಟೀಲ, ಮಂಜುನಾಥ ಸಿರಿಗೇರಿ, ಸಣ್ಣಬೀರೇಶ್ ಗುಡಗೂರ, ಸೋಮಶೇಖರ ಗುಂಡಗಟ್ಟಿ, ಸೋಮಶೇಖರ ಹೊನ್ನತ್ತಿ ಸೇರಿದಂತೆ ಅಭಿಮಾನಿಗಳ ಸಂಘದ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ