ಗೋಕಾಕ್

ಭಾರಿ ಬಿರುಗಾಳಿಗೆ ಕಿತ್ತುಬಿದ್ದ ರೈಲು ನಿಲ್ದಾಣದ ಶೆಡ್‌: ತಪ್ಪಿದ ಭಾರಿ ಅನಾಹುತ

ಭಾರಿ ಬಿರುಗಾಳಿಗೆ ಕಿತ್ತುಬಿದ್ದ ರೈಲು ನಿಲ್ದಾಣದ ಶೆಡ್‌: ತಪ್ಪಿದ ಭಾರಿ ಅನಾಹುತ


ಘಟಪ್ರಭಾ 31: ಸಂಜೆ ಬೀಸಿದ ಬಿರುಗಾಳಿಗೆ ಇಲ್ಲಿಯ ಹಳೆಯ ರೈಲು ನಿಲ್ದಾಣದ ಕಟ್ಟಡ ಮೇಲೆ ಹಾಕಲಾಗಿದ್ದ ಬೃಹತ ತಗಡಿದ ಶೆಡ್‌ಗಳು ಕಿತ್ತು ಬಿದ್ದಿದ್ದು, ದೊಡ್ಡ ಅನಾಹುತ ತಪ್ಪಿದೆ. 

ಘಟಪ್ರಭಾ ರೈಲು ನಿಲ್ದಾಣಕ್ಕೆ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಸೋರುತ್ತಿರುವ ಹಳೆಯ ಕಟ್ಟಡದ ಹಂಚಿನ ಮೇಲೆ ತಾತ್ಕಾಲಿಕವಾಗಿ ತಗಡಿನ ಶೆಡ್ ಹಾಕಲಾಗಿತ್ತು. ಆದರೆ ಸದರಿ ತಗಡಿಗೆ ಯಾವುದೆ ಸುರಕ್ಷತೆ ಕ್ರಮ ಕೈಗೊಳ್ಳದೆ ನಾಮಕೆ ವಾಸ್ತೆ ತಗಡಗಳನ್ನು ಹಾಕಿ ಕಳಪೆ ಕಾಮಗಾರಿ ಮಾಡಲಾಗಿದೆ. 

ಮಂಗಳವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ಹಂಚಿನ ಮೇಲೆ ಹಾಕಲಾದ ಪತ್ರಾಸಗಳು ಎಂಗಲ್ ಸಹಿತ ಕಿತ್ತು ಹೋಗಿದ್ದು, ಹೊಸದಾಗಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಲೈನ್ ಮೇಲೆ ಬಿದ್ದಿವೆ. ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಇರುವ ರೈಲು ನಿಲ್ದಾಣದಲ್ಲಿ ಆಗುವ ದೊಡ್ಡ ಅನಾಹುತ ತಪ್ಪಿದೆ. ರೈಲು ನಿಲ್ದಾಣ ಪಕ್ಕದಲ್ಲಿ ಮುಖ್ಯ ಮಾರ್ಕೇಟ್ ಇದ್ದು, ಈ ಪತ್ರಾಸಗಳು ಹಾರಿ ಹೊರಗೆ ಬಂದಿದ್ದರೆ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು.  

ರೈಲು ನಿಲ್ದಾಣ ಹಳೆಯ ಕಟ್ಟಡದ ಮೇಲೆ ಮಾಡಲಾದ ಕಾಮಗಾರಿಗಳು ತೀರಾ ಕಳಪೆ ಮಟ್ಟದಾಗಿದ್ದು, ಯಾವುದೆ ಭದ್ರತೆ ಇಲ್ಲದೆ ಕಾಮಗಾರಿಗಳನ್ನು ನಾಮಕೆ ವಾಸ್ತೆ ಮಾಡಲಾಗಿದೆ ಎಂದು ಸಾರ್ವಜನಿಕರ ಹಾಗೂ ಪ್ರಯಾಣಿಕರ ಆರೋಪವಾಗಿದೆ. 

ಈ ಘಟನೆ ಕುರಿತು ಘಟಪ್ರಭಾ ರೈಲ್ವೆ ಸ್ಟಷನ್ ಮಾಸ್ಟರ್ ಅವರಿಗೆ ವಿಚಾರಿಸಿದರೆ. ಸದರಿ ಕಾಮಗಾರಿಗಳು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕಾಗಿ ನಮ್ಮ ಇಲಾಖೆಯಲ್ಲಿ ಎಸ್‌.ಎಸ್‌.ಐ ಎಂದು ಬೇರೆ ವಿಭಾಗವಿದೆ ಇದು ಅವರಿಗೆ ಸಂಬಂದಿಸಿದ್ದು ಎಂದು ಹೇಳಿ ಜಾರಿಕೊಂಡರು. 


ಸುದ್ದಿ ಓದಿ