ರಾಹುಲ್ ಗಾಂಧಿ ಜನ್ಮ ದಿನ: ಪೌರ ಕಾರ್ಮಿಕರ ಪಾದಪೂಜೆ
ಅಥಣಿ 19: ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ ಗಾಂಧಿಯವರ ಜನ್ಮ ದಿನದ ಅಂಗವಾಗಿ ಅಥಣಿ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಕರೋನಾ ವಾರಿಯರ್ಸ ಪೌರಕಾರ್ಮಿಕರ ಪಾದಪೂಜೆ ಮಾಡಲಾಯಿತು.
ಪಾದಪೂಜೆ ನೆರವೇರಿಸಿ ಮಾತನಾಡಿದ ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಗ್ರಾಮ, ಪಟ್ಟಣ, ನಗರ ಹಾಗೂ ಮಹಾನಗರಗಳು ಸ್ವಚ್ಛ, ಸುಂದರ ಮತ್ತು ಆರೋಗ್ಯ ಪೂರ್ಣವಾಗಿರಬೇಕಾದಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ ಆದರೆ ಈ ಪೌರಕಾರ್ಮಿಕರು ಮಾತ್ರ ಜನರಿಂದ ನಿರ್ಲಕ್ಷಕ್ಕೊಳಪಟ್ಟಿರುತ್ತಾರೆ ಇಂತಹ ಕಾರ್ಮಿಕರನ್ನು ನಮ್ಮ ರಾಷ್ಟ್ರೀಯ ನಾಯಕರ ಜನ್ಮ ದಿನದಂದು ಗುರುತಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
ಕರೋನಾ ದಿಂದ ಮೃತ ಪಟ್ಟ ನೂರಾರು ಮೃತ ದೇಹಗಳಿಗೆ ಮುಕ್ತಿಯನ್ನು ಕೂಡ ನೀಡಿದ್ದಾರೆ ಇಂತಹ ಕಾರ್ಮಿಕರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದ್ದು, ಇಂದು ಅವರ ಪಾದಪೂಜೆ ಮಾಡಿ ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ಕಾಂಗ್ರೆಸ್ ಮುಖಂಡ ಸುನೀಲ ಸಂಕ ಮಾತನಾಡಿ, ಕಾಂಗ್ರೆಸ್ ಪಕ್ಷದ ಸರ್ವೋಚ್ಚ ನಾಯಕ ರಾಹುಲ ಗಾಂಧಿಯವರು ತಮ್ಮ ಪ್ರಭುದ್ಧ ನಡುವಳಿಕೆ ಮೂಲಕ ಕೇವಲ ಭಾರತದ ಅಷ್ಟೇ ಅಲ್ಲ ವಿಶ್ವದ ಗಮನ ಸೆಳೆದ ರಾಜಕಾರಣಿಯಾಗಿದ್ದಾರೆ. ಇಂದು ಅವರ ಜನ್ಮ ದಿನವನ್ನು ವಿಶೇಷವಾಗಿ ಅಥಣಿ ಕಾಂಗ್ರೆಸ್ ಮುಖಂಡರು ಪೌರಕಾರ್ಮಿಕರ ಪಾದಪೂಜೆ ಮಾಡುತ್ತಿರುವ ಕಾರ್ಯವನ್ನು ಅಭಿನಂದಿಸಿದರು.
ಪೌರಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ರವಿ ಕಾಂಬಳೆ, ಮುಖಂಡರಾದ ಅನೀಲ ಸುಣಧೋಳಿ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಧರೆಪ್ಪ ಠಕ್ಕಣ್ಣವರ, ಬಸವರಾಜ ಬುಟಾಳಿ, ರಮೇಶ ಸಿಂದಗಿ, ರಾವಸಾಹೇಬ ಐಹೊಳೆ, ಶ್ರೀಕಾಂತ ಪೂಜಾರಿ, ರಾಜು ಜಮಖಂಡಿಕರ, ಬಾಬು ಖೆಮಲಾಪೂರ, ಪಾಂಡು ಐಹೊಳೆ, ಸಂಜೀವ ಕಾಂಬಳೆ, ಸುನೀತಾ ಐಹೊಳೆ, ಅಸ್ಲಂ ನಾಲಬಂದ, ಮಯೂರ ಸಿಂಗೆ ಸೇರಿದಂತೆ ಪೌರಕಾರ್ಮಿಕರು, ಪುರಸಭಾ ಸಿಬ್ವಂದಿಗಳು ಉಪಸ್ಥಿತರಿದ್ದರು.