ಯರಗಟ್ಟಿ

ರೇಬಿಸ್ ಸೋಂಕು ಪ್ರಾಣಿಯಿಂದ ಪ್ರಾಣಿಗೆ, ಪ್ರಾಣಿಯಿಂದ ಮನುಷ್ಯನಿಗೆ ಹರಡುತ್ತದೆ: ಡಾ ಮಡಿವಾಳೇಶ

ರೇಬಿಸ್ ಸೋಂಕು ಪ್ರಾಣಿಯಿಂದ ಪ್ರಾಣಿಗೆ, ಪ್ರಾಣಿಯಿಂದ ಮನುಷ್ಯನಿಗೆ ಹರಡುತ್ತದೆ: ಡಾ ಮಡಿವಾಳೇಶ

ಯರಗಟ್ಟಿ 30: ರೇಬಿಸ್ ಸೋಂಕನ್ನ ತಡೆಯುವದು ಹಾಗೂ ಜಾಗೃತೆ ಮೂಡಿಸುವ ಸಲುವಾಗಿ  ದಿ. 28 ರಿಂದ ವಿಶ್ವ ರೇಬಿಸ್ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ ಎಂದು ಡಾ ಮಡಿವಾಳೇಶ ಹೇಳಿದರು.ಅವರು ದಿ. 29 ರಂದು ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾದ ವಿಶ್ವ ರೇಬಿಸ್ ದಿನಾಚರಣೆಯಲ್ಲಿ ಮಾತನಾಡಿ,  ರೇಬಿಸ್ ಸೋಂಕು ಪ್ರಾಣಿಯಿಂದ ಪ್ರಾಣಿಗೆ, ಪ್ರಾಣಿಯಿಂದ ಮನುಷ್ಯ ನಿಗೆ ಹರಡುತ್ತದೆ. ಜ್ವರ ನಿಶ್ಯಕ್ತಿ ತಲೆನೋವು ಆಯಾಸ ಅಶ್ವಸ್ತತೆ ಇದರ ಲಕ್ಷಣಗಳಾಗಿದ್ದು. ಮೆದುಳು ಸೋಂಕಿನಿಂದ ಆತಂಕ ಗೊಂದಲ ಉಂಟಾಗಿ ರೋಗಿಗೆ ನೀರು ಬೆಂಕಿ ಕಂಡರೆ ಹೆದರಿಕೆ ಕಂಡುಬರುತ್ತದೆ.   ಇದನ್ನು ನಿಯಂತ್ರಣ ಮಾಡಲು - ನಾಯಿ ಇತರೆ ಸಾಕುಪ್ರಾಣಿಗಳ ನ್ನು ಕಚ್ಚದಂತೆ ನೋಡಿಕೊಳ್ಳುವದು. ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸುವುದಾಗಿದೆ ಎಂದು ಅವರು ಹೇಳಿದರು.ಸದರಿ ಕಾರ್ಯಕ್ರಮದಲ್ಲಿ ಡಾ.ರಮಾಶ್ರೀ  ಕಣಗಲಿ. ಎಸ್‌.ಬಿ ಬೆಂಡಿಗೇರಿ. ಎನ್‌.ಎಂ ಹಾರೂಗೊಪ್ಪ, ಡಾ ವೀಣಾ ಇಟ್ನಾಳಮಠ, ಮಾಂತೇಶ ಕತ್ತಿ, ಮಾಂತೇಶ ಹಿರೇಮಠ, ರುದ್ರಗೌಡ ಪಾಟೀಲ, ಪ್ರಕಾಶ ಮಾಂಗ, ರಾಮಚಂದ್ರ ಚನ್ನಯ್ಯ ನವರ, ಮೋಯನುದ್ದಿನ ಗೊರೆಕಾನ, ಸಮೀರ ಗೊರೆಕಾನ, ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಹಾಜರಿದ್ದರು. ಡಾ.ಬಿ.ಎಸ್ ಬಳ್ಳೂರ ಮುಖ್ಯ ವೈದ್ಯಾಧಿಕಾರಿಗಳು ಇವರು ಅಧ್ಯಕ್ಷತೆ ವಹಿಸಿದ್ದರು. 

ಮಕ್ಕಳು  ಇತರರು ಪ್ರಾಣಿಗಳ ಸಂಪರ್ಕ ಕ್ಕೆ  ಬರದಂತೆ ನೋಡಿಕೊಳ್ಳುವುದು. ಸೋಂಕಿತ ನಾಯಿ ಕಚ್ಚಿದಾಗ  ಅದನ್ನು ಸ್ವಚ್ಛಗೊಳಿಸುವದು ಮತ್ತು ಲಸಿಕೆ ಮಾಡಿಸುವದಾಗಿದೆ. ಬಾವಲಿಗಳಿಂದ ದೂರವಿರುವದು,  ಬೀದಿ ನಾಯಿಗಳನ್ನ ನಿಯಂತ್ರಣ ಮಾಡುವದಾಗಿದೆ. ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ "ಎಲ್ಲರಿಗೂ ಒಂದೇ ಆರೋಗ್ಯ " ಎಂಬುದು. ಈ ವರ್ಷದ ಘೋಷಣೆಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ  ಆಯ್ ಆರ್ ಗಂಜಿ ಹೇಳಿದರು.  ಮಂಜುನಾಥ ಸಿಂಗನ್ನವರ ನಿರೂಪಣೆ ಮಾಡಿ  ಎನ್ ಎಂ ಹಾರೂಗೊಪ್ಪ ಸ್ವಾಗತಿಸಿ. ಅಶೋಕ ನೀಲನ್ನವರ ವಂದಿಸಿದರು. 


ಸುದ್ದಿ ಓದಿ