ರಾಣೆಬೆನ್ನೂರ

ವಿನಾಯಕನ ದರ್ಶನ ಪಡೆದ ಸಚಿವ ಆರ್.ಶಂಕರ್ ಕುಟುಂಬಸ್ಥರು

ವಿನಾಯಕನ ದರ್ಶನ ಪಡೆದ ಸಚಿವ ಆರ್.ಶಂಕರ್ ಕುಟುಂಬಸ್ಥರು

ರಾಣೇಬೆನ್ನೂರು 15: ರಾಜಧಾನಿಯಿಂದ ನಗರಕ್ಕೆ ಬಂದ ವಿಧಾನ ಪರಿಷತ್ ಸದಸ್ಯ ಹಾಗೂ ಸಚಿವರಾದ ಆರ್.ಶಂಕರ್ ತಮ್ಮ ಪತ್ನಿ ಧನಲಕ್ಷ್ಮೀ ಶಂಕರ್ ಕುಟುಂಬದೊಂದಿಗೆ ಪ್ರಥಮ ಭಾರಿಗೆ ನಗರದ ಕೆಇಬಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅರ್ಚಕರು ಗೌರವ ಪೂರ್ವಕವಾಗಿ ನೀಡಿದ ಸನ್ಮಾನ ಸ್ವೀಕರಿಸಿದರು. 

ತಾಲೂಕಾಧ್ಯಕ್ಷ ಬಸವರಾಜ ಕೇಲಗಾರ, ನಗರಾಧ್ಯಕ್ಷ ದೀಪಕ್ ಹರಪನಹಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಮುಖಂಡ ಡಾ. ಬಸವರಾಜ ಕೇಲಗಾರ, ಭಾರತಿ ಜಂಬಗಿ, ರಾಜು ಅಡಿವೆಪ್ಪನವರ, ಮಂಜುಳಾ ಹತ್ತಿ,  ಅಜಯ್ ಮಠದ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಗಣ್ಯರು ಭಾಗವಹಿಸಿದ್ದರು. 

ಸುದ್ದಿ ಓದಿ