ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು: ಮುಖಂಡ. ಸಾಹೇಬಗೌಡ
ತಾಳಿಕೋಟಿ24: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಮಹತ್ವಾಕಾಂಕ್ಷೇಯ ಯೋಜನೆಯಾದ ಜಲ ಜೀವನ ಮಿಷನ್(ಜೆಜೆಎಂ) ಯನ್ನು ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಜಾರಿಯಲ್ಲಿ ತರುವದರ ಮೂಲಕ ಪ್ರತಿ ಗ್ರಾಮದ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್ಯ ದೇ. ಹಿಪ್ಪರಗಿ ಶಾಸಕ ಸೋಮನಗೌಡರು ಮಾಡುತ್ತಿದ್ದಾರೆ ಎಂದು ಅವರ ಸಹೋದರ ಮುಖಂಡ ಸಾಹೇಬಗೌಡ ಪಾಟೀಲ ತಿಳಿಸಿದರು.
ಮತಕ್ಷೇತ್ರದ ಆನೇಮಡು ಹಾಗೂ ಚಟ್ನಳ್ಳಿ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಿಂದಗಿ, 2021-22ನೇ ಸಾಲಿನ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಸುಮಾರು ರೂ. 61ಲಕ್ಷ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬಿಜೆಪಿ ರೈತಮೋರ್ಚಾ ಜಿಲ್ಲಾ ಅದ್ಯಕ್ಷ ಸಿದ್ದು ಬುಳ್ಳಾ(ಕೆರೂಟಗಿ) ಮಾತನಾಡಿ ದೇ.ಹಿಪ್ಪರಗಿ ಮತ ಕ್ಷೇತ್ರದ ಕಟ್ಟಕಡೆಯ ಗ್ರಾಮಗಳೂ ಅಭಿವೃದ್ಧಿಯಿಂದ ವಂಚಿತ ಆಗಬಾರದೆಂಬುದು ಶಾಸಕ ಸೋಮನಗೌಡರ ಕಾಳಜಿ ಆಗಿದೆ ಆನೇಮಡು ಒಂದು ಕುಗ್ರಾಮ ಈ ಮೊದಲು ಯಾವ ಜನಪ್ರತಿನಿಧಿಯೂ ಇಲ್ಲಿ ಭೇಟಿ ನೀಡಿರಲಿಲ್ಲ ಇಂಥಹ ಗ್ರಾಮಗಳನ್ನು ಗುರುತಿಸಿ ಅವುಗಳನ್ನು ಶಾಸಕರು ಅಭಿವೃದ್ಧಿ ಪಡಿಸುತ್ತಿದ್ದಾರೆ. ಈ ಕಾರಣದಿಂದ ಮುಂದಿನ ಬಾರಿಯೂ ನಿಮ್ಮ ಆಶೀರ್ವಾದ ಅವರೊಂದಿಗಿರಲಿ ಎಂದರು.
ಮುಖಂಡರಾದ ರಮೇಶ ಮಸಿಬನಾಳ ರಾಮನಗೌಡ ನಾವದಗಿ, ರಾಯನಗೌಡ ನೀರಲಗಿ, ಮಹೇಶ ಗೌಡ ಹೀರೇಗೌಡರ, ಗುತ್ತಿಗೆದಾರ ಎಂ. ಆಯ್. ಮುಲ್ಲಾ,
ಗ್ರಾಪಂ ಮಾಜಿ ಅಧ್ಯಕ್ಷ ಮಾಹಾಂತೇಶ ಚೌದ್ರಿ, ನಬಿ ಮುಲ್ಲಾ, ಮೌನೇಶ ಪೂಜಾರಿ, ಸುಧಾಕರ ಸಜ್ಜನ, ಮಹಾಂತೇಶ ಸಜ್ಜನ, ಅಪ್ಪು ಚಟ್ಟರಕಿ, ಬಸನಗೌಡ ಅಸ್ಕಿ ಅದ್ಯಕ್ಷ ಕಏಕಖ ಎಇಇ ಭಾಗ್ಯಶ್ರೀ ಕಟಗೇರಿ, ಎಇ ವಿ.ಬಿ. ನಾಯಕ ಮುಂತಾದವರು ಉಪಸ್ಥಿತರಿದ್ದರು.