ಮಾನಸಿಕ ನೆಮ್ಮದಿಗೆ ಪುರಾಣ ಅವಶ್ಯ: ಮುರಘೇಂದ್ರ ಶ್ರೀಗಳು
ಲೋಕದರ್ಶನ ವರದಿ
ಯರಗಟ್ಟಿ 23: ಆಧುನಿಕ ಧಾವಂತದ ಬದುಕಿನ ಪರಿಣಾಮವಾಗಿರುವ ಒತ್ತಡದ ಬದುಕಿಗೆ ಪುರಾಣ-ಪ್ರವಚನಗಳು ಪರಿಹಾರಗಳಾಗಿವೆ ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ಯ ಆಯೋಜಿಸಿದ ಕಲಬುರ್ಗ್ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಶ್ರೀಮಠಕ್ಕೆ ಬೇಕಾಗುವ ಯಾತ್ರಿ ನಿವಾಸ ಹಾಗೂ ಶ್ರೀಮಧ ಅಭಿವೃದ್ಧಿಗೆ ಸದಾ ಬದ್ಧ ಎಂದು ಹೇಳಿದರು.
ಶ್ರೀಮಠದಲ್ಲಿ ಸೋಮವಾರ ಆರಂಭಗೊಂಡಿರುವ ಪುರಾಣವು ಸೆ. 15 ರಂದು ಮುಕ್ತಾಯಗೊಳ್ಳಲಿದೆ.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಮುನವಳ್ಳಿ ಮುರುಘೇಂದ್ರ ಶ್ರೀಗಳು, ಮನುಷ್ಯ ತನ್ನ ಎಲ್ಲ ಅಗತ್ಯಗಳಲ್ಲಿ ಅಂತರ್ಜಾಲದ ಮೂಲಕ ಅಂಗೈಯಲ್ಲಿ ಪೂರೈಸಿಕೊಳ್ಳುತ್ತಿದ್ದಾನೆ. ಆದರೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ನೆಮ್ಮದಿಗಾಗಿ ಪುರಾಣ, ಪುಣ್ಯಕಥೆಗಳ ಶ್ರವಣ ಅಗತ್ಯವಾಗಿದೆ ಎಂದರು.
ಲಿಂ. ಪುಟ್ಟರಾಜ ಗವಾಯಿಗಳ ಶಿಷ್ಯರಾದ ಚನ್ನವೀರ ಸ್ವಾಮಿಗಳು ಹಿರೇಮಠ(ಕಡಣಿ) ಅವರು ಪುರಾಣ ಪ್ರವಚನ ನೀಡಲಿದ್ದಾರೆ. ಪಂಚಾಕ್ಷರಿ ಇಟಗಿಮಠ ಸಂಗೀತ ಸೇವೆ ಸಲ್ಲಿಸಿದರು. ಮಣಿಕಂಠ ಗೌಡ ರಾಜಾಪುರ ತಬಲಾ ಸಾಥ್ ನೀಡಿದರು.
ರಾಜರಾಜೇಶ್ವರಿ ಆಶ್ರಯದ ಗಣಪತಿ ಮಹಾರಾಜರು, ಲೋಕಸಭಾ ಸದಸ್ಯೆ ಮಂಗಲಾ ಅಂಗಡಿ, ಪಿಕೆಪಿಎಸ್ ಅಧ್ಯಕ್ಷ ಅಜೀತಕುಮಾರ ದೇಸಾಯಿ, ಅಶೋಕ ಹಾದಿಮನಿ, ಮಹಾದೇವಪ್ಪ ಕಾಮಣ್ಣವರ, ಈರಪ್ಪ ಹಾದಿಮನಿ, ಅಶೋಕ ಜಕಾತಿ, ಶರಣೆ ಉಮಾದೇವಿ ಪೂರ್ವಿಮಠ, ಶ್ರೀಮಠದ ಅಧ್ಯಕ್ಷ ಮಹಾಂತೇಶ ಜಕಾತಿ, ಶ್ರೀಮಠದ ಕಾರ್ಯದರ್ಶಿ ರಾಜೇಂದ್ರ ವಾಲಿ, ಶ್ರೀಮಠದ ಸಂಚಾಲಕ ಶಿವಾನಂದ ಪಟ್ಟಣಶೆಟ್ಟಿ, ಮೋಹನ ಹಾದಿಮನಿ, ರಾಜೇಂದ್ರ ಶೆಟ್ಟಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು