ಗ್ರಾಮದ ಅಭಿವೃದ್ಧಿಗೆ ‘ಪುರ ಉತ್ಸವ’ ಮುನ್ನುಡಿ : ಗೊಂಡಬಾಳ
ತಾವರಗೇರಾ (ಕುಷ್ಟಗಿ) 04: ಇಲ್ಲಿಗೆ ಸಮೀಪದ ಐತಿಹಾಸಿಕ ಪುರ ಉತ್ಸವ ನಡೆಸುವ ಸಂಬಂಧ ಇಂದು ಪುರ ಸೋಮನಾಥೇಶ್ವರ (ಕೋಟಿಲಿಂಗ) ದೇವಸ್ಥಾನದ ಆವರಣದಲ್ಲಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಉತ್ಸವದ ಸಂಚಾಲಕ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ಅವರು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಕನ್ನಡ ಜಾನಪದ ಪರಿಷತ್, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಸಹಭಾಗಿತ್ವದಲ್ಲಿ ಆಚರಿಸಲಾಗುತ್ತಿರುವ ಪುರ ಉತ್ಸವದ ಮೊದಲ ಪೂರ್ವಭಾವಿ ಸಭೆಯಲ್ಲಿ ಉತ್ಸವದ ರೂಪರೇಷೆ ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು. ದೇವಸ್ಥಾನಕ್ಕೆ ಸುಮಾರು ನಾಲ್ಕು ಶತಮಾನದಿಂದ 12 ಶತಮಾನಗಳ ಕಾಲವನ್ನು ಇತಿಹಾಸದ ಶಾಸನಗಳು ಹೇಳುತ್ತಿವೆ ಆದರೆ ರಾಜಕಾರಣಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರಕಾರದ ಸುಪರ್ಧಿಯಲ್ಲಿರುವದರಿಂದ ಅದರ ಬಗ್ಗೆ ಅನಾದರ ಉಂಟಾಗಿದೆ. ಮುಂದೆ ಅದಕ್ಕೆ ಸಂಭಂಧಿಸಿದಂತೆ ಒಂದು ಸಮಿತಿ ಮಾಡಿ ನೋಂದಣಿ ಮಾಡುವ ಮೂಲಕ ಅದೇ ಸಮಿತಿಯಿಂದ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಪ್ರವಾಸೋಧ್ಯಮದ, ಇತಿಹಾಸ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಅದರ ಜೀರ್ಣೋದ್ಧಾರಕ್ಕೆ ಶ್ರಮಿಸೋಣ ಎಂದರು. ಮುಂದಿನ ಸಭೆಯಲ್ಲಿ ಉತ್ವದ ದಿನಾಂಕ ಪ್ರಕಟಿಸಲಾಗುವದು ಎಂದರು.
ಗ್ರಾಮದ ಮುಖಂಡ ರಮೇಶ ಗಿರಣಿ ಮಾತನಾಡಿ ಕುಷ್ಟಗಿಯಿಂದ ವಿಧಾನಸೌಧದವರೆಗೆ ಅಲೆದು ಅಲೆದು ಸಾಕಾಗಿದೆ, ಸ್ಥಳಿಯ ಅಧಿಕಾರಿಗಳು ಮಾತ್ರ ಒರ್ಷಕ್ಕೊಮ್ಮೆ ಎರಡು ಬಾರಿ ಬಂದು ಹುಂಡಿಯ ಹಣ ಒಯ್ದವರು ಮತ್ತೆ ಇತ್ತ ಬರಲ್ಲ, ಶಾಸಕರುಗಳಿಗೆ ಇದರ ಉಸಾಬರಿಯೇ ಬೇಕಿಲ್ಲ ಅದಕ್ಕಾಗಿ ಉತ್ಸವದ ಆಚರಣೆ ಹೊಸ ಆಸೆ ಹುಟ್ಟಿಸಿದ್ದು, ಹಲವು ರಾಜ್ಯಗಳ ಭಕ್ತರನ್ನು ಹೊಂದಿರುವ ಐತಿಹಾಸಿಕ ಪುರವನ್ನು ಉತ್ತಮ ಧಾರ್ಮಿಕ ಪ್ರವಾಸಿ ತಾಣ ಮಾಡುವ ತಮ್ಮ ಯೋಜನೆಗೆ ಊರಿನ ಸರ್ವ ಜನರೂ ಸಾಥ್ ನೀಡುತ್ತಾರೆ, ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಾರೆ, ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳದೇ ಅಭಿವೃದ್ಧಿ ಮಾಡಿರಿ ಎಂದು ಸಂಘಟಕರನ್ನು ವಿನಂತಿಸಿಕೊಂಡರು.
ದೇವಸ್ಥಾನದ ಅರ್ಚಕ ಸೋಮಯ್ಯ ಹಿರೇಮಠ ಇತಿಹಾಸದ ಮಾಹಿತಿ ನೀಡಿದರು. ಪ್ರಸ್ತುತ ದೇವಸ್ಥಾನದ ಅರ್ಚನೆ ಮಾಡುತ್ತಿರುವ ಮಹಾಂತೇಶ ಹಿರೇಮಠ ಅವರು ಮಾತನಾಡಿ, ದೇವಸ್ಥಾನಕ್ಕೆ ಬೇಕಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶಾಚಾಲಯ, ಸ್ನಾನ ಗೃಹ ಹಾಗು ವಸತಿ ಸೌಲಭ್ಯ ಬೇಕು, ಇರುವ ಸಭಾ ಭವನ ಸರಿಯಾದ ಕಾಳಜಿ ಇಲ್ಲದ್ದರಿಂದ ಬಿದ್ದು ಹೋಗುತ್ತಿವೆ. ಅಧಿಕಾರಿಗಳು ಇತ್ತ ಗಮನಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶಬಾಬು ಸುರ್ವೆ, ಪತ್ರಕರ್ತ ಶರಣಬಸವ ನವಲಹಳ್ಳಿ ಮಾತನಾಡಿದರು.
ಸಭೆಯಲ್ಲಿ ತಾಲೂಕ ಪಂಚಾಯತಿ ಸದಸ್ಯ ಗರುಡಪ್ಪ ಹವಾಲ್ದಾರ, ಸಂಗನಾಳ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶರಣಪ್ಪ ಹಂಚಿನಾಳ, ಸದಸ್ಯರಾದ ಯಂಕೋಬ ಗದ್ದಿ, ಶಿವಪ್ಪ ಮುಳ್ಳೂರು, ಮಹೇಶ ಪಾಟೀಲ್, ರೇವಣಪ್ಪ ರ್ಯಾವಣಕಿ, ಸೋಮಣ್ಣ ಮುಳ್ಳೂರು, ಸೋಮನಾಥ ಮಡಿವಾಳರ, ಸೋಮನಾಥ ರ್ಯಾವಣಕಿ, ಹೊನ್ನಪ್ಪ ನಾಯಕ, ಶರಣಬಸವ ಮುಳ್ಳೂರು, ಪತ್ರಕರ್ತ ಭೀಮನಗೌಡ ಪೋ.ಪಾ. ಸೇರಿದಂತೆ ಡಾ. ಬಿ.ಆರ್. ಅಂಬೇಡ್ಕರ ಯುವಕ ಸಂಘ, ಕನಕದಾಸ ಯುವಕ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ, ಸೋಮೇಶ್ವರ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು ಸಲಹೆ ಸೂಚನೆ ನೀಡಿದರು.