ಪುಂಡಲೀಕನ ಭಾವ ತೋರಣ ಪುಸ್ತಕ ಬಿಡುಗಡೆ
ಗೋಕಾಕ 25: ಸೋಮವಾರದಂದು ಶಿಂಗಳಾಪೂರ ಗ್ರಾಮದಲ್ಲಿ ಅದ್ಧೂರಿಯಾಗಿ ಪುಸ್ತಕವನ್ನು ಲೋಕಾರೆ್ಣ ಮಾಡಲಾಯಿತು. ಪುಸ್ತಕ ಬಿಡುಗಡೆ ಮಾಡಿದ ಅಶೋಕ ನಿಂಗಯ್ಯ ಪೂಜೇರಿಯವರು ಮಾತನಾಡುತ್ತಾ ಶರಣರು ಸಂತರು ಈ ನಾಡಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ದೇವರೆನಿಸಿಕೊಂಡಿದ್ದಾರೆ. ಅದರಲ್ಲಿ ಶರಣ ಪುಂಡಲಿಕ ಶಿಂಗಳಾಪೂರ ರವರು ಕೂಡಾ ಒಬ್ಬರು. ಯಾಕೆಂದರೆ ಈಗಿನ ಯುಗದಲ್ಲಿ ಇಂತಾ ವ್ಯಕ್ತಿಗಳು ಸಿಗುವುದು ಅಪರೂಪ. ಶಿಕ್ಷಣವಿಲ್ಲದೆ ಸಿದ್ದಾರೂಡರು ಶಾಮಾನಂದರು ಸಾಕ್ಷಾತ ದೇವರು ಎನಿಸಿಕೊಂಡಿದ್ದಾರೆ. ಅದರ ಹಾದಿಯಲ್ಲಿ ಪುಂಡಲಿಕರು ಶಿಕ್ಷಣವಿಲ್ಲದೆ ತಾವೇ ರಚಿಸಿರುವ ಭಜನಾ ಪದಗಳು ಬರೆದು ನಮ್ಮದೆ ನಾಡಿಗೆ ಸಂತಸ ತಂದಿದೆ.
ದೇವರ ಆಶೀರ್ವಾದ ಶರಣ ಸಂತರ ಆಶೀರ್ವಾದ ಅವರ ಮೇಲೆ ಇರುವುದರಿಂದ ಅವರಿಗೆ ಬರೆಯಲಿಕ್ಕೆ ಕಾರಣವಾಯಿತು. ಈಗ ಅವರು ಇಲ್ಲದಿದ್ದರೂ ಅವರು ಬರೆದ ಪದಗಳ ಮೂಲಕ ಜೀವಂತರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದದ ಉದ್ಘಾಟಕರಾಗಿ ಆಗಮಿಸಿದ ಶಾಮಾನಂದ ಪೂಜೇರಿ ಧರ್ಮದರ್ಶಿಗಳು ಸಿದ್ದಾರೂಢಮಠ ಹುಬ್ಬಳ್ಳಿ ವೇದಿಕೆಯ ಮೇಲೆ ಶಂಕರಾನಂದ ಸ್ವಾಮೀಜಿಗಳು, ಶ್ರೀಶೈಲ ಕಂಬಿ, ಅಶೋಕ ಲಗಮಪ್ಪಗೋಳ, ದೀಪಕ ಮಾಳಗಿ, ಸತ್ಯಪ್ಪ ಝಂಗಟಿಹಾಳ, ರಸಿದ ಫಿರಜಾದೆ, ವಾಯಿದ ಫಿರಜಾದೆ, ಪ್ರವೀಣ ಫಾಸ್ಟರ್, ಶಿವಾಜಿ ಜಾಧವ ಉಪಸ್ಥಿತರಿದ್ದರು.
ನಿಂಗಪ್ಪಾ ಮಾಹದೇವ ಪೂಜೇರಿ, ಜ್ಯೋತಿ ಶೆಟ್ಟಿ ಯವರನ್ನು ಸನ್ಮಾಸಲಾಯಿತು. ಪ್ರಾರ್ಥನಾ ಗೀತೆಯನ್ನು ಖುಷಿ ಶಿಂಗಳಾಪೂರ ಹಾಡಿದರು. ದಾಸರ ನಿರೂಪಣೆ ಮಾಡಿದರು. ಕೆಂಪಣ್ಣ ಶಿಂಗಳಾಪೂರ ವಂದಿಸಿದರು.