ಪುಲ್ವಾಮಾ: ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ
ಸಿಂದಗಿ 16: ತಾಲೂಕಿನ ಮಾಡಬಾಳ ಗ್ರಾಮದಲ್ಲಿ ಹುತಾತ್ಮ ಯೋಧ ಸೋಮಲಿಂಗರಾಯ ಸಿ.ಬಗಲಿಯವರ ಸ್ಮಾರಕದ ಆವರಣದಲ್ಲಿ ಗ್ರಾಮದ ವಿವಿಧ ಸಂಘಟನೆಯ ಯುವಕರಿಂದ ದಿ.14 ರಂದು ರಾತ್ರಿ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ದೀಪ ಬೆಳಗಿಸುವ ಮೌನ ನಮನೊಂದಿಗೆ ಗೌರವಿಸಲಾಯಿತು.
ಯೋಧರನ್ನು ನೆನೆದು ಯುವಕ ಪ್ರಶಾಂತ ಬಗಲಿ ಮಾತನಾಡಿ, ದೇಶಕ್ಕಾಗಿ ಪ್ರಾಣ ತೆತ್ತ ಯೋಧರ ಕುಟುಂಬ ಎಂದಿಗೂ ನಿರಾಶ್ರಿತರಲ್ಲ ಅವರೊಂದಿಗೆ ಇಡೀ ದೇಶವೇ ಇದೆ ಎಂದರು.
ವಿಶಾಲ ನಾಯ್ಕೋಡಿ ಮಾತನಾಡಿ, ಯೋಧರ ಬಲಿದಾನ ಯಾರು ಎಂದಿಗೂ ಮರೆಯಲಾರರು ಇದು ಮುಂದಿನ ಜನಾಂಗಕ್ಕೆ ಶಕ್ತಿದಾಯಕವಾಗಿದೆ. ಎಂದರು.
ಕಾರ್ಯಕ್ರಮದಲ್ಲಿ ಸಂತೋಷ ಬಗಲಿ, ಶ್ರೀಶೈಲ ಪೂಜಾರಿ, ರವಿ ಬಗಲಿ, ಪಿಂಟೂ ಕೊಂಡಗೂಳಿ, ಭೀರು ಮೊಕಾಸಿ, ಭೀಮಾಶಂಕರ ಅಗಸರ, ಸಿದ್ದನಗೌಡ ಅಂಬಳನೂರ, ರೇವಣಸಿದ್ದ ಕೊಂಡಗೂಳಿ, ಅರುಣ ಹುಂಡೇಕಾರ, ಮುತ್ತು ಕೊಂಡಗೂಳಿ, ಶಿವು ಬಗಲಿ, ಸಾಹೇಬಗೌಡ ಕೆಂಚಗೊಂಡ, ನಿಖೀಲ ಯಾದಗಿರ ಸೇರಿದಂತೆ ಇತರರಿದ್ದರು.