ಉಗಾರ ಖುರ್ದದಲ್ಲಿ 3,200ಕ್ಕೂ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ
ಕಾಗವಾಡ 28: ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಪಟ್ಟಣದ ಮುಖಂಡ ಹಾಗೂ ಜನಸೇವಕ ವಿನಾಯಕ ಕಾಂಬಳೆ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಈ ಅಭಿಯಾನದಡಿ ಪಟ್ಟಣದಲ್ಲಿ ಸುಮಾರು 3,200ಕ್ಕೂ ಅಧಿಕ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಫಾತಿಮಾ ನದಾಫ, ವೈದ್ಯಾಧಿಕಾರಿ ಡಾ. ಪೂಜಾ ಕಪೂರಮಠ, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎ.ಎಸ್. ಕುಂಬಾರ, ಮುಖಂಡರಾದ ವಿಜಯ ಅಸೋದೆ, ರಸೂಲ ನದಾಫ, ರಾಜೇಶ ದಾನೋಳೆ, ಸುವರ್ಣಾ ಯಾದವ, ಸಂಜೀವಿನಿ ಜಾಧವ, ಶುಶ್ರೂಷಕ ಅಧಿಕಾರಿ ರಮಾದೇವಿ ಅಂಕಲಿ, ಆಶಾ ಕಾರ್ಯಕರ್ತೆಯರಾದ ಶೈನಾ ಹೆಗಡೆ, ರಾಜಶ್ರೀ ಕುರಾಡೆ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಮಾಂಗ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.