ಕಾರವಾರ

ರೋಟರಿ ಕ್ಲಬ್‍ನಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ

ರೋಟರಿ ಕ್ಲಬ್‍ನಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ

ಕಾರವಾರ 02: ರೋಟರಿ ಕ್ಲಬ್ ಕಾರವಾರ ಸದಸ್ಯರು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.  ಪೋಲಿಯೋ ಕಾರ್ಯಕ್ರಮ ದಿ: 31  ರಂದು ಜಿಲ್ಲಾ ಸಿವಿಲ್ ಆಸ್ಪತ್ರೆಯಲ್ಲಿ  ರೂಪಾಲಿ ಎಸ್, ನಾಯ್ಕ, ಶಾಸಕರು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಇವರ ಮುಖಾಂತರ ಉದ್ಘಾಟಿಸಲಾಯಿತು. 

ಕಾರ್ಯಕ್ರಮಕ್ಕೆ ರೋಟರಿ ಆದ್ಯಕ್ಷ ರೋ. ಸುನೀಲ ಸೋನಿ ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.  ಎರಡನೇ ದಿನದ ಕಾರ್ಯಕ್ರಮಕ್ಕಾಗಿ ದಿ: 01 ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಯಿಂದ ಸುಮಾರ 200 ಪೋಲಿಯೋ ಕಾರ್ಯಕರ್ತರಿಗೆ ಮಧ್ಯಾಹ್ನದ ಉಪಹಾರವನ್ನು ನೀಡಿಲಾಯಿತು.  ಆಹಾರದ ವ್ಯವಸ್ಥೆಯನ್ನು ಪಲ್ಸ್ ಪೋಲಿಯೋ ಚೇರ್‍ಮನ್ ರೋ. ಅನಮೋಲ ರೇವಣಕರ ಪ್ರಾಯೋಜಿಸಿದ್ದರು. ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ. ಸುರಜಾ ನಾಯ್ಕ ಉಪಸ್ಥಿತರಿದ್ದರು.

ಸುದ್ದಿ ಓದಿ