ಬಸ್ ಹತ್ತಲೂ ಸಾರ್ವಜನಿಕರ ನೂಕು ನುಗ್ಗಲು
ಮೂರಾ್ನಲ್ಕು ತಾಸು ಕಾಯ್ದರು ಸಿಗದ ಬಸ್: ಎಲ್ಲ ಆರ್ಡಿನರ್ ಬಸ್ಸುಗಳಲ್ಲಿ ಉಚಿತ ಪ್ರಯಾಣ ನೀಡಲು ಆಗ್ರಹ
ಯರಗಟ್ಟಿ 16: ರಾಜ್ಯ ಸರ್ಕಾರದ ನೂತನ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಟಿಕೆಟ್ ನೀಡಲಾಗುತ್ತಿದ್ದು, ಮಹಿಳೆಯರು ಹೆಚ್ಚು ಹೆಚ್ಚಾಗಿ ಸಂಚರಿಸುತ್ತಿದಾರೆ. ಸರ್ಕಾರದ ಹಸಿರು ಬಸ್‌ಗಳಿಗೆ ಮಾತ್ರ ಉಚಿತವಿದ್ದು, ಬಸ್ ನಿಲ್ದಾಣದಲ್ಲಿ ಸುಮಾರು ಮೂರರಿಂದ ನಾಲ್ಕುತಾಸು ಕುಳಿತುಕೊಳ್ಳುವಂತಾಗಿದೆ.
ಯರಗಟ್ಟಿ ಪಟ್ಟಣಕ್ಕೆ ಧಾರವಾಡದಿಂದ ಗೋಕಾಕ ಮಾರ್ಗ ಬಸ್ ಬರುತ್ತಿದ್ದು, ಬಾಗಲಕೋಟೆಯಿಂದ ಬೆಳಗಾವಿ ಬಸ್‌ಗಳು ಸಂಚರಿಸುತ್ತಿದ್ದು, ಅವುಗಳ ಅಲ್ಲಿಂದಲೇ ತುಂಬಿ ಬರುತ್ತಿದ್ದು, ಗ್ರಾಮೀಣ ಮಹಿಳೆಯರು ಯರಗಟ್ಟಿ ಬಸ್ ನಿಲ್ದಾಣದಲ್ಲಿ ಮೂರು ತಾಸು ಕುಳಿತರು ಸಹ ಯಾವುದೇ ಒಂದು ಬಸ್ ಕೂಡ ಖಾಲಿ ಬರಲಿಲ್ಲ. ಸರ್ಕಾರವು ಎಲ್ಲಾಬಸ್ಸಿಗೆ ಉಚಿತ ಪ್ರಯಾಣ ಪರವಾನಗಿ ನೀಡಬೇಕೆಂದು ಯರಗಟ್ಟಿಯಲ್ಲಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಉಚಿತ ಪ್ರಯಾಣ ಕೆಂಪು ಬಸ್ಸುಗಳಿಗೆ ನೀಡಿರುವುದಿಲ್ಲ. ತಕ್ಷಣ ನಗರ ಸಾರಿಗೆಯ ಏಸಿ ಹೊರತುಪಡಿಸಿ ಎಲ್ಲ ಆರ್ಡಿನರ್ ಬಸ್ಸುಗಳಗೆ ಉಚಿತ ಪ್ರಯಾಣ ಒದಗಿಸಿ ಕೊಡಬೇಕೆಂದರು.
ಸಾರ್ವಜನಿಕರಿಗೆ ಆಧಾರಕಾರ್ಡ್ ಅಥವಾ ಗುರುತಿನ ಚೀಟಿ ತರುವ ಬದಲು ಆನ್‌ಲೈನ್ ಮೂಲಕ ಪಾಸ್‌ಗಳನ್ನು ವಿತರಿಸಿ ಅನುಕೂಲ ಮಾಡಬೇಕು ಪ್ರತಿದಿನ ಆಧಾರ ಗುರುತಿನ ಚೀಟಿ ತರುವುದನ್ನು ತಪ್ಪಿಸಬೇಕು. ಬಸ್ಸಿನಲ್ಲಿ ಮಿತಿಮಿರಿ ಜನರು ಹತ್ತುತ್ತಿದ್ದು, ಒಂದು ಬಸ್ಸಿಗೆ ಇಷ್ಟೇ ಜನರೆಂದು ಆದೇಶ ಮಾಡಬೇಕು ಬೇಕಾಬಿಟ್ಟಿ ಜನರು ಬಸ್ಸಿನಲ್ಲಿ ಹತ್ತುವಾಗ ಗದ್ದಲದಲ್ಲಿ ಸರಗಳ ಕಳ್ಳತನ, ಮೊಬೈಲ್ ಕಳ್ಳತನ ಮುಂತಾದವುಗಳು ಕಳ್ಳತನ ಆಗುವುದನ್ನು ತಪ್ಪಿಸಬೇಕು.