ಬ್ಯಾಡ್ಗಿ

ಸಾರ್ವಜನಿಕ ಆಸ್ಪತ್ರೆ ನ್ಯಾಯಾಧೀಶ ಸುರೇಶ ದಿಢೀರ್ ಭೇಟಿ: ಪರಿಶೀಲನೆ

ಸಾರ್ವಜನಿಕ ಆಸ್ಪತ್ರೆ ನ್ಯಾಯಾಧೀಶ ಸುರೇಶ ದಿಢೀರ್ ಭೇಟಿ: ಪರಿಶೀಲನೆ

ಬ್ಯಾಡಗಿ:ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಬಸ್ ನಿಲ್ದಾಣಗಳಿಗೆ ಮಂಗಳವಾರ ಸ್ಥಳೀಯ ದಿವಾಣಿ ನ್ಯಾಯಾಧೀಶ ರಾದ ಸುರೇಶ ವಗ್ಗನವರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಎಲ್ಲಾ ವಾರ್ಡಗಳಿಗೆ ತೆರಳಿ ಒಳ ಮತ್ತು ಹೊರರೋಗಿ ಗಳ ಮಾಹಿತಿ ಪಡೆದರಲ್ಲದೇ, ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ರೋಗಿಗಳು ವೈದ್ಯರು ಹಾಗೂ ಸಿಬ್ಬಂ ದಿಗಳಿಂದ ವಿವರವಾದ ಮಾಹಿತಿ ಪಡೆದರು.

 ಆಸ್ಪತ್ರೆಯಲ್ಲಿರುವ ಫಾರ್ಮಸಿಗೆ ಭೇಟಿ ನೀಡಿದ ಅವರು, ಪ್ಯಾಕೆಟ್ಗಳ ಮೇಲೆ ನಮೂದಿಸಿರುವ ಔಷಧಿಯ ಅಂತಿಮ ದಿನಾಂಕ (ಎಕ್ಸಪೈರ್ ಡೇಟ್) ಪರಿಶೀಲಿಸಿದರು. ಔಷಧಿ ಬಳಕೆ ಮಾಡುವ ದಿನಾಂಕ ಮುಗಿದಂತಹುಗಳನ್ನು ಪ್ರತ್ಯೇಕ ಸ್ಥಳ ದಲ್ಲಿ ಸಂಗ್ರಹಿಸಿಡಬೇಕು, ಇಲ್ಲವಾದರೆ ಯಾವ ಔಷಧಿ ಕೊಡಬೇಕೆಂಬುದು ತಮಗೂ ಸಹ ತಿಳಿಯುವುದಿಲ್ಲ ಮುಂದೆ ಭೇಟಿ ನೀಡುವ ಸಂದರ್ಭದಲ್ಲಿ ಅಂತಿಮ ದಿನಾಂಕ ಮುಗಿದ ಔಷಧಿಗಳ ಕೊಠಡಿಯನ್ನು ಬೇರೆ ಮಾಡುವಂತೆ ಸೂಚಿಸಿದರು.

ವ್ಯವಸ್ಥೆಗೆ ಪ್ರಶಂಸೆ:ಬಳಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪುಟ್ಟರಾಜ ಕಾರ್ಯಾಲಯಕ್ಕೆ ತೆರಳಿ, ವೈದ್ಯಕೀಯ ವ್ಯವಸ್ಥೆ ಕುರಿತು ಕೆಲಕಾಲ ಚರ್ಚಿಸಿ ಮತ್ತಷ್ಟು ಮಾಹಿತಿ ಪಡೆದರು, ಈ ವೇಳೆ ಆಸ್ಪತ್ರೆಯ ಸ್ವಚ್ಛತೆ, ವೈದ್ಯಕೀಯ ಸೇವೆ, ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರಲ್ಲದೇ, ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಘಟಕ ವ್ಯವಸ್ಥಾಪಕರಿಗೆ ನೋಟಿಸ್:ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಶೌಚಾಲಯಕ್ಕೆ ಬೇಟಿ ನೀಡಿ ಪರಿ ಶೀಲನೆ ನಡೆಸಿದರು. ಹೊರಬರುತ್ತಿರುವ ದುರ್ವಾಸನೆ ಮನಗಂಡ ಘಟಕ ವ್ಯವಸ್ಥಾಪಕರಿಗೆ ನೊಟೀಸ್ ನೀಡುವಂತೆ ಸೂಚಿಸಿ ದರು. 

ನ್ಯಾಯಾಲಯದ ಸಿಬ್ಬಂದಿಗಳಾದ ಪ್ರವೀಣ ಗಟ್ಟಿಮನಿ, ಕುಸಮಾ ಕಾಂಬ್ಳೆ, ಮನೋಜ ದೇಸಾಯಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಸುದ್ದಿ ಓದಿ