ಬ್ಯಾಡ್ಗಿ

ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ

ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ

ಬ್ಯಾಡಗಿ 30: ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲು ಸ್ವೀಕರಿಸಲು ತಹಸೀಲ್ದಾರ ಕಾರ್ಯಾಲಯದಲ್ಲಿ ಸಭೆ ನಡೆಸಲು ಆಗಮಿಸಿದ್ದರೂ ಸ್ಥಳೀಯ ತಹಸೀಲ್ದಾರರು ಪತ್ರಕರ್ತರು ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ, ಇದರಿಂದದೂರು ನೀಡಲು ಆಗಮಿಸಬೇಕಿದ್ದ ಬಹುತೇಕ ನಾಗರಿಕರಿಗೆ ಅನಾನುಕೂಲವಾಗಿದೆ ಎಂದು ಮಾಜಿ ಸೈನಿಕ ಮಲ್ಲೇಶ ಪ್ಪಚಿಕ್ಕಣ್ಣನವರ ಆರೋಪಿಸಿದರು.

ಇಲ್ಲಿನ ತಹಸೀಲ್ದಾರ ಕಾಯರ್ಾಲಯದಲ್ಲಿ ಜರುಗಿದ ಜಿಲ್ಲಾಧಿಕಾರಿ ರಘುನಂದನಮೂತರ್ಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸಭೆ ನಡೆಸುವ ಕುರಿತು ಮಾದ್ಯಮಗಳ ಮೂಲಕ ಮಾಹಿತಿ ನೀಡಿಲ್ಲ, ಪತ್ರಕರ್ತರು ಸೇರಿದಂತೆಯಾರಿಗೂ ಮಾಹಿತಿ ಸಿಗದೆ, ಸಾರ್ವಜನಿಕರು ಅರ್ಜಿ  ಸಲ್ಲಿಸಲು ತೀವ್ರ ತೊಂದರೆಯಾಗಿದೆ. ತಾಲೂಕಿನ ರೈತರು, ವಿವಿಧ ಯೋಜನೆಗಳ ಫಲಾನುಭವಿಗಳು, ಅಜರ್ಿದಾರರು, ಸೌಲಭ್ಯ ಪಡೆಯಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳ, ಸಿಬ್ಬಂದಿಗಳ ನಿರ್ಲಕ್ಷ್ಯವನ್ನು ಖಂಡಿಸಿ ನಾಗರಿಕರು ದೂರು ಸಲ್ಲಿಸಬೇಕಿದ್ದು, ಜಿಲ್ಲಾಧಿಕಾರಿಗಳ ಅಹವಾಲು ಸ್ವೀಕಾರ ಸಭೆಕುರಿತು ಪತ್ರಕರ್ತರು ಹಾಗೂ ಸಾರ್ವಜನಿಕರು, ಸಂಘ, ಸಂಸ್ಥೆಗಳಿಗೆ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರದ ಉದ್ದೇಶ ಈಡೇರಬೇಕಿದ್ದಲ್ಲಿ ಸಮರ್ಪಕವಾಗಿ ಮಾಹಿತಿ ನೀಡಬೇಕು. ಇಲ್ಲವಾದ್ರೆ ಸ್ಥಳೀಯ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಖಂಡಿಸಿದೂರು ಸಲ್ಲಿಸಲು ಸಾದ್ಯವಾಗುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.ಕ್ರೀಡಾಂಗಣಕ್ಕೆ ಕುಡಿಯುವ ನೀರು ಒದಗಿಸಿ:  ಪಟ್ಟಣದ ಎಸ್ಜೆಜೆಎಂ ಸಕರ್ಾರಿ ಕ್ರೀಡಾಂಗಣದಲ್ಲಿ ಕುಡಿಯುವ ನೀರು, ಶೌಚಕೊಠಡಿಗಳು, ಮಹಿಳಾ ವಿಶ್ರಾಂತಿ ಕೊಟಡಿಗಳು ಸಮರ್ಪಕವಾಗಿ ಇರುವುದಿಲ್ಲ, ವಿದ್ಯಾರ್ಥಿನಿಯರು ಶೌಚಕ್ಕೆ ಪತ್ಯೇಕ ವ್ಯವಸ್ಥೆಯಿಲ್ಲದೆ ಪ್ರತಿನಿತ್ಯ ಪರದಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಂದ ಹಿಡಿದು ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ಈ ಕ್ರೀಡಾಂಗಣದಲ್ಲಿ ಆಯೋಜಿಸಿದ್ದರೂ ಈವರೆಗೂ ಮೂಲಸೌಲಭ್ಯ ಇಲ್ಲವಾಗಿದೆ. ಕ್ರೀಡಾಂಗಣ ನಿರ್ವಹಣೆ ಸಮಿತಿಗೆ ಶಾಸಕರೆ ಅಧ್ಯಕ್ಷರಾಗಿದ್ದು, ಸೌಲಭ್ಯ ಇಲ್ಲವಾಗಿದೆ. ಜಿಲ್ಲಾ ಕ್ರೀಡಾಧಿಕಾರಿಗಳು ಒಮ್ಮೆಯೂ ಸಾರ್ವಜನಿಕರ ಸಭೆ ಕರೆದಿರುವುದಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಕ್ರೀಡಾಂಗಣ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಂತೆ ಒತ್ತಾಯಿಸಿದರು.

ತಹಸೀಲ್ದಾರ ಕಚೇರಿಗಬ್ಬವಾಸನೆ: ಸ್ಥಳೀಯ ತಹಸೀಲ್ದಾರ ಕಾಯರ್ಾಲಯದ ಮೂತ್ರಾಲಯಗಳು ಗಬ್ಬೆದ್ದು ಹೋಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಕಚೇರಿಗೆ ತೆರಳಬೇಕಿದೆ. ಪಕ್ಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ದುನರ್ಾತಕ್ಕೆ ರೋಸಿದ್ದಾರೆ. ಈ ಕುರಿತು ಹಿಂದೆ ಮುಖ್ಯಮಂತ್ರಿಗಳ ಕಾರ್ಯದರ್ಶಿ  ಮಣಿವಣ್ಣನ್ ಕಚೇರಿಗೆ ಬೇಟಿ ನೀಡಿದ ವೇಳೆ ಸಾರ್ವಜನಿಕರು ದೂರು ಸಲ್ಲಿಸಿದ್ದರು.ಆದರೆ ಸಿಬ್ಬಂದಿಗಳು ಎಚ್ಚೆತ್ತುಕೊಂಡಿಲ್ಲ, ಅತಿವೃಷ್ಟಿಯಲ್ಲಿ ಬಿದ್ದ ಮನೆ ಪ್ರಕರಣ ಹಾಗೂ ಮನೆನಿರ್ಮಿಸಿದ ಮನೆಫಲಾನುಭವಿಗಳಿಗೆ ಅನುದಾನ ಲಭ್ಯವಾಗಿಲ್ಲ. ಈ ಕುರಿತು ಸಾಕಷ್ಟು ಅರ್ಜಿ ದಾರರು ಕಚೇರಿಗೆ ಅಲೆದಾಡುತ್ತಿದ್ದಾರೆ. 15 ದಿನಗಳಿಂದ ಗುಮಾಸ್ತರುಕಚೇರಿಗೆ ಆಗಮಿಸಿಲ್ಲ, ಬೇರೊಬ್ಬರಿಗೆ ಕರ್ತವ್ಯವಹಿಸಿದರೂ ಅಧಿಕೃತವಾಗಿ ಚಾರ್ಚ ಪಡೆದಿಲ್ಲ, ನನಗೆ ಏನೂ ಗೊತ್ತಿಲ್ಲವೆಂದು ಹಾಲಿ ಸಿಬ್ಬಂದಿ ಉತ್ತರಿಸುತ್ತಾರೆ. ಹೀಗಾದ್ರೆ ಸಾರ್ವಜನಿಕರಿಗೆ ಯೋಜನೆಗಳ ದೊರಕುವುದು ಹೇಗೆ..? ಸಾರ್ ಎಂದು ಪ್ರಶ್ನಿಸಿದರು.ಕಾನಿಪ ಪತ್ರಕರ್ತರ ಸಂಘದ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಮಾತನಾಡಿ, ತಹಸೀಲ್ದಾರ ಕಾರ್ಯಾ ಲಯದ ಸಕರ್ಾರದ ವಿವಿಧ ಕಾರ್ಯಕ್ರಮಗಳು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ ಸೇರಿದಂತೆ ಬಹುತೇಕ ವಿಶೇಷ ಸಂದರ್ಭದಲ್ಲಿ ಮಾಹಿತಿ ನೀಡಲು ಸಿಬ್ಬಂದಿಗಳು ನಿರ್ಲಕ್ಷಿಸುತ್ತಿದ್ದಾರೆ. ಈ ಕುರಿತು ಹಿಂದೆ ಮೇಲಾಧಿಕಾರಿಗಳಿಗೆ ಮೌಖಿಕವಾಗಿದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಂಡು ಸಾರ್ವಜನಿಕರಿಗೆ ಹಾಗೂ ಪತ್ರಕರ್ತರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 6 ಅರ್ಜಿ ಗಳು ದಾಖಲಾದವು 

ಸುದ್ದಿ ಓದಿ