ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ನನ್ನ ಕರ್ತವ್ಯ, ನನ್ನ ಬದ್ಧತೆ ಮತ್ತು ನನ್ನ ಸಂಕಲ್ಪ : ಡಾ. ಶೈಲೇಂದ್ರ ಬೆಲ್ದಾಳೆ

ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ನನ್ನ ಕರ್ತವ್ಯ, ನನ್ನ ಬದ್ಧತೆ ಮತ್ತು ನನ್ನ ಸಂಕಲ್ಪ : ಡಾ. ಶೈಲೇಂದ್ರ ಬೆಲ್ದಾಳೆ
Providing irrigation facilities to farmers is my duty, my commitment and my resolve: Dr. Shailendra

ಬೀದರ್ 21 : ನಮ್ಮ ದೇಶ ಕೃಷಿ ಪ್ರಧಾನ ದೇಶ. ರೈತರು ನಮ್ಮ ದೇಶದ ಹೃದಯ. ಅವರ ಶ್ರಮದಿಂದಲೇ ನಾವು ಅನ್ನವನ್ನು ಪಡೆಯುತ್ತೇವೆ. ಆದರೆ ಇಂದಿಗೂ ಹಲವಾರು ರೈತರು ನೀರಿನ ಅಭಾವದಿಂದ ಸಂಕಷ್ಟಗಳನ್ನು ಎದುರಿಸುತ್ತಿರುವುದು ದುಃಖಕರ ಸಂಗತಿ ಹೀಗಾಗಿ ನಮ್ಮ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು. ಬೀದರ್ ದಕ್ಷಿಣ ಕ್ಷೇತ್ರದ ಬಾಪುರ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ನೀರಾವರಿ ಇಲಾಖೆಯ ವತಿಯಿಂದ 2026ಹಿ27ನೇ ಸಾಲಿನ ಯೋಜನೆಯಡಿ ?5 ಕೋಟಿ ವೆಚ್ಚದಲ್ಲಿ 400 ಎಕರೆ ಜಮೀನಿಗೆ ನೀರು ಹರಿಸುವ ಏತ ನೀರಾವರಿಯ ಮಹತ್ವದ ನೀರಾವರಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. 

ನಮ್ಮ ರೈತರು ದೇಶದ ಬೆನ್ನೆಲುಬು. ಅವರ ಶ್ರಮದಿಂದಲೇ ನಮ್ಮ ಬದುಕು ಸಾಗುತ್ತಿದೆ. ಆದರೆ ನೀರಿನ ಕೊರತೆಯಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳು ನಮ್ಮೆಲ್ಲರಿಗೂ ತಿಳಿದಿವೆ. ಈ ಹಿನ್ನೆಲೆಯಲ್ಲಿ, ಈ ಯೋಜನೆ ರೈತರ ಬದುಕಿನಲ್ಲಿ ಹೊಸ ಆಶಾಕಿರಣವಾಗಿ ಪರಿಣಮಿಸಲಿದೆ.ಈ ಯೋಜನೆಯಿಂದ ಬೆಳೆ ಉತ್ಪಾದನೆ ಹೆಚ್ಚಾಗುತ್ತದೆ, ರೈತರ ಆದಾಯದಲ್ಲಿ ಏರಿಕೆ ಕಾಣಿಸುತ್ತದೆ ಮತ್ತು ಅವರ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗುತ್ತದೆ. ನೀರಾವರಿ ಸೌಲಭ್ಯಗಳು ಹೆಚ್ಚಾದಂತೆ ಗ್ರಾಮೀಣ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗುತ್ತದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ.

ಈ ಯೋಜನೆ ಆ ಬದ್ಧತೆಯ ಸ್ಪಷ್ಟ ಉದಾಹರಣೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ನಾವು ಸಂಕಲ್ಪ ಮಾಡಿದ್ದೇವೆ.ರೈತರಿಗೆ ಸಮರ​‍್ಕವಾದ ನೀರಾವರಿ ಸೌಲಭ್ಯ ಒದಗಿಸುವುದು ಕೇವಲ ಸರ್ಕಾರದ ಕರ್ತವ್ಯವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ನೀರು ಇದ್ದರೆ ಬೆಳೆ ಇದೆ, ಬೆಳೆ ಇದ್ದರೆ ಬದುಕು ಇದೆ. ಈ ಸತ್ಯವನ್ನು ನಾವು ಯಾವತ್ತೂ ಮರೆಯಬಾರದು. ನೀರಾವರಿ ಯೋಜನೆಗಳ ಮೂಲಕ ರೈತರ ಭೂಮಿಗೆ ನೀರನ್ನು ತಲುಪಿಸುವುದು, ಅವರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.

ಈ ದಿಕ್ಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಮತ್ತು ಮುಂದುವರೆಯಲಿದೆ. ನಾವು ರೈತರ ಬೆನ್ನಿಗೆ ನಿಂತು, ಅವರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರೈತ ಬಲಿಷ್ಠನಾದರೆ ದೇಶ ಬಲಿಷ್ಠವಾಗುತ್ತದೆ. ಹೀಗಾಗಿ, ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ನನ್ನ ಕರ್ತವ್ಯ, ನನ್ನ ಬದ್ಧತೆ ಮತ್ತು ನನ್ನ ಸಂಕಲ್ಪ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಹಣಮಂತರಾವ ಪಾಟೀಲ, ಶಿವಕುಮಾರ ಸ್ವಾಮಿ, ಗುರುನಾಥ್ ರಾಜಗೀರ ಬಗದಲ, ಬಸವರಾಜ ಬೋರಾಳ, ಉದಯ ತೋರಣ, ಸಂತೋಷ ಹಳ್ಳಖೇಡ, ಚಂದ್ರಶೇಖರ ಪಾಟೀಲ, ರಾಜಶೇಖರ ನೌಬಾದೆ,ನಾಗರಾಜ ಪಾಟೀಲ, ರಾಜಕುಮಾರ ಪಾಂಚಾಳ, ಓಂಕಾರ ಸ್ವಾಮಿ, ಬಸವಣಪ್ಪ ಆಣದೂರ, ಕಾಶಿನಾಥ, ಶಿವಾನಂದ ಪಾಟೀಲ, ಶಾಮಣ್ಣ, ಜಗನಾಥ, ನೀತೀಶ್ ನಂದಕುಮಾರ, ರಾಚಪ್ಪ, ಶಾಂತಲಿಂಗಯ್ಯಾ ಸ್ವಾಮಿ, ಸಾಯಿನಾಥ ಪಾಟೀಲ, ಬಸವರಾಜ ಹೇಡೆ, ಶಿವಕುಮಾರ ಸುಲ್ತಾನಪುರ, ಪ್ರಶಾಂತ ರೆಡ್ಡಿ, ಸಚೀನ್, ಮೋಹನ, ವಿನೋದ, ಮತ್ತಿತರರು ಉಪಸ್ಥಿತರಿದ್ದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ ಸಹಾಯಕ ನಾಗೇಶ ಸಿದ್ದಾ. 


ಸುದ್ದಿ ಓದಿ