ಯುವ ಕಲಾವಿದರಿಗೂ ಆರ್ಥಿಕ ಸಹಾಯ ನೀಡಿ
ಶಿಗ್ಗಾವಿ 01: ಯುವ ಕಲಾವಿದರನ್ನು ಆಥರ್ಿಕ ಸಹಾಯ ನೀಡುವಲ್ಲಿ ಪರಿಗಣಿಸಬೇಕು ಎಂದು ಯುವ ಜನಪದ ಕಲಾವಿದರಾದ ಶರೀಫ ಮಾಕಪ್ಪನವರ ಸಕರ್ಾರಕ್ಕೆ ಮನವಿ ಮಾಡಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದೆರಡು ವರ್ಷಗಳಿಂದ ಕರೋನಾ ರೋಗದ ಕಾರಣದಿಂದ ಸಾಂಸ್ರ್ಕತಿಕ ಚಟುವಟಿಕೆಗಳು ಸ್ಥಬ್ಧವಾಗಿವೆ ಕಲೆಯನ್ನೆ ವ್ರತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳ ಪರಿಸ್ಥಿತಿ ಹೇಳತೀರದ್ದಾಗಿದೆ ಹಾಗಾಗಿ ಈ ಸಾರಿ ಸಕರ್ಾರ ಕಲಾವಿದರಿಗೆ ಆಥರ್ಿಕ ಪ್ಯಾಕೇಜನ್ನು ಘೋಷಿಸಿದೆ ಆದರೆ ಇದರಲ್ಲಿ 35 ವರ್ಷ ಹೊಂದಿರುವ ಕಲಾವಿದರಿಗೆ ಮಾತ್ರ ಸೌಲಭ್ಯ ಪಡೆಯಲು ಅವಕಾಶ ನೀಡಿರುವುದು ಯುವ ಕಲಾವಿದರಿಗೆ ಸಾಕಷ್ಟು ನೋವು ತಂದಿದೆ ಎಂದರು.
ಇಂದು ನಾಡಿನಾದ್ಯಂತ ಅನೇಕ ಯುವ ಕಲಾವಿದರು ಕಲೆಯನ್ನೆ ಜೀವನವನ್ನಾಗಿಸಿಕೊಂಡು ಕಲಾ ಸೇವೆ ಮಾಡುತ್ತಿದ್ದಾರೆ, ಆದರೆ ಕರೋನಾ ಲಾಕಡೌನ್ ನಿಂದ ಯಾವುದೇ ಸಾಂಸ್ರ್ಕತಿಕ ಕಾರ್ಯಕ್ರಮಗಳಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆೆ ಹಾಗಾಗಿ ಸಕರ್ಾರ ಸುಮಾರು 5 ರಿಂದ 10 ವರ್ಷ ಸೇವೆ ಸಲ್ಲಿಸಿದ ವೃತ್ತಿ ನಿರತ ಯುವ ಕಲಾವಿದರಿಗೂ ಈ ಆಥರ್ಿಕ ಸಹಾಯಕ್ಕೆ ಅರ್ಹರೆಂದು ಪರಿಗಣಿಸಿ ಪರಿಹಾರ ನೀಡಬೇಕೆಂದು ಸಕರ್ಾರಕ್ಕೆ ಮನವಿ ಮಾಡಿಕೊಂಡರು