ಯರಗಟ್ಟಿ

ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ: ಚೌರಡ್ಡಿ

ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ: ಚೌರಡ್ಡಿ

ಯರಗಟ್ಟಿ 11: ಸಮೀಪದ ತಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್‌.ಕೆ.ಚೌರಡ್ಡಿ ಹಾಗೂ ಸವದತ್ತಿ ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ ಇತ್ತೀಚೆಗೆ ಭೆೇಟಿ ನೀಡಿ ಪರೀಶೀಲಿಸಿದರು. 

ಅಭಿವೃದ್ಧಿ ಅಧಿಕಾರಿ ಎಚ್‌.ಕೆ.ಚೌರಡ್ಡಿ ಆಸ್ಪತ್ರೆ ದಾಖಲಾತಿಗಳನ್ನು ಪರೀಶೀಲಿಸಿ ಮಾತನಾಡಿ, ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದರು. ಆಸ್ಪತ್ರೆ ಆವರಣದಲ್ಲಿ ಪ್ಲೆವರ‌್ಸ ಕಳಪೆ ಮಟ್ಟದಿಂದ ಅಳವಡಿಸಿದ್ದನ್ನು ವೀಕ್ಷಿಸಿ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಯಾವುದೇರಿತಿಯ ಲೋಪವಾಗದಂತೆ ನಿಗಾವಹಿಸಿ ಕಾಮಗಾರಿ ಮಾಡಬೇಕು ಇಲ್ಲದಿದ್ದಲ್ಲಿ ಸೂಕ್ತಕ್ರಮ ಜರುಗಿಸಲಾಗುವದು ಎಂದು ಎಚ್ಚರಿಸಿದರು. 

ಸವದತ್ತಿ ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ ಮಾತನಾಡಿ, ರಾಜ್ಯದ ವಿವಿಧೆಡೆ ಈಗಾಗಲೇ ಡೆಂಘೀ ಪ್ರಕರಣಗಳು ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಆವರಿಸುತ್ತಿವೆ. ಇದರಿಂದಾಗಿ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಆರಂಭದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಸಾರ್ವಜನಿಕರಿಗೆ ಡೆಂಘೀ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. 

ಸಮಾಜ ಸೇವಕ ರವಿ ಗಾಣಿಗೇರ, ನಿವೃತ್ತ ಶಿಕ್ಷಕ ಎ.ವಿ.ಇಂಗಳೆ, ಸಲಹಾ ಸಮಿತಿ ಸದಸ್ಯ ಆರ್‌.ಬಿ.ಅಣ್ಣಿಗೇರಿ, ವೀರೇಶ ದೇಮಶೆಟ್ಟಿ, ಎಸ್‌.ಎಸ್‌.ಉಪ್ಪಿನ ಇತರರು ಇದ್ದರು. 


ಸುದ್ದಿ ಓದಿ