ಉಚಿತ ಲಸಿಕೆ ಪೂರೈಸಿ ಜನರ ಜೀವ ಉಳಿಸಿ ಸ್ಲೋಗನ್ನೊಂದಿಗೆ ಪ್ರತಿಭಟನೆ
ಮುಂಡಗೋಡ: ಉಚಿತ ಲಸಿಕೆ ಪೂರೈಸಿ ಜನರ ಜೀವ ಉಳಿಸಿ ಎಂಬ ಸ್ಲೋಗನ್ನೊಂದಿಗೆ ಕನರ್ಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ತಾಲೂಕಾ ಸಮಿತಿ ಅಧ್ಯಕ್ಷ ಬೀಮಣ್ಣ ಭೋವಿ ನೇತ್ರತ್ವದಲ್ಲಿ ಶುಕ್ರವಾರ ಪಾಳಾ ಗ್ರಾಮದಲ್ಲಿ ಸಾಮಾಜಿಕ ಅಂತರದೊಂದಿಗೆ ಪ್ರತಿಭಟನೆ ನಡೆಸಿದರು.ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕಲ್ಲದೆ, ಸೋಂಕಿತರಿಗೆ ಸಮರೋಪಾದಿಯಲ್ಲಿ ಬೆಡ್, ಔಷಧಿ ಹಾಗೂ ಆಮ್ಲಜನಕ ಸೇರಿದಂತೆ ಅಗತ್ಯ ಚಿಕಿತ್ಸೆ ನೀಡಬೇಕು. ಎಲ್ಲ ಅಸಂಘಟಿತ ಕಾಮರ್ಿಕರು ಹಾಗೂ ಆಧಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಕುಟುಂಬಗಳಿಗೆ ಮೂರು ತಿಂಗಳು 10 ಸಾವಿರ ರೂಪಾಯಿ ನೆರವು ನೀಡಬೇಕು. ತಲಾ 10 ಕೆಜಿಯಂತೆ 6 ತಿಂಗಳು ಆಹಾರ ಧಾನ್ಯ ಉಚಿತವಾಗಿ ನೀಡಬೇಕು. ರೈತ ವಿರೋಧಿ ಕಾಯ್ದೆಯನ್ನು ಕೈಬಿಟ್ಟು ಕೃಷಿ ಉತ್ಪನ್ನಗಳಿಗೆ ಸಮರ್ಪಕವಾದ ಮಾರುಕಟ್ಟೆ ವೈಜ್ಞಾನಿಕವಾದ ಬೆಂಬಲ ಬೆಲೆ, ಬೆಳೆ ಪರಿಹಾರ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಡಿ 200 ಕೆಲಸದ ದಿನಗಳಿಗೆ 700 ರೂಪಾಯಿಯಂತೆ ಕೂಲಿ ನೀಡಬೇಕಲ್ಲದೆ, ನಗರಪ್ರದೇಶಕ್ಕೂ ಇದನ್ನು ವಿಸ್ತರಿಸಬೇಕು. ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕತರ್ೆಯರು, ಪೌರಕಾಮರ್ಿಕರು ಸೇರಿದಂತೆ ಎಲ್ಲ ಕೋವಿಡ್ ವಾರಿಯರ್ಸ್ಗಳಿಗೆ ಸುರಕ್ಷೆ ವಿಮೆ ನೀಡಬೇಕು ಎಂದು ಒತ್ತಾಯಿಸಿದರು.ಕನರ್ಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ತಾಲೂಕಾ ಸಮಿತಿ ಅಧ್ಯಕ್ಷ ಬೀಮಣ್ಣ ಭೋವಿ, ಮಂಜುನಾಥ ದಾವಣಗೇರಿ, ಶಾರದಾ ಭೋವಿ, ಬಸವರಾಜ ಭೋವಿ, ಕಮಲವ್ವ ಭೋವಿ, ಚಿನ್ನವ್ವ ಭೋವಿ ಮುಂತಾದವರು ಉಪಸ್ಥಿತರಿದ್ದರು