ಟೈಲರ್ ಕನ್ಹಯ್ಯಲಾಲ ಹತ್ಯೆ ಖಂಡಿಸಿ ನಾಳೆ ಪ್ರತಿಭಟನೆ
ಇಂಡಿ: ರಾಜಸ್ಥಾನದ ಉದಪುರದಲ್ಲಿ ಟೈಲರ್ ಕನ್ಹಯ್ಯಲಾಲ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ಸೋಮವಾರ 4ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಹಿಂಪ ತಾಲೂಕಾ ಘಟಕದ ಅಧ್ಯಕ್ಷ ಪ್ರಕಾಶ ಬಿರಾದಾರ, ಬಜರಂಗದಳ ಪ್ರಮುಖ ರಾಜಗುರು ದೇವರ ಹೇಳಿದರು.
ಅವರು ಶನಿವಾರ ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 11 ಗಂಟೆಗೆ ಶಾಂತೇಶ್ವರ ದೇವಸ್ಥಾನದಿಂದ, ಕುಂಬಾರ ಓಣಿ, ಅಂಚೆ ಕಚೇರಿ, ಡಾ. ಅಂಬೇಡ್ಕರವೃತ್ತ, ಬಸವೇಶ್ವರ ವೃತ್ತದ ಮೂಲಕ ಅಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಮಿನಿ ವಿಧಾನಸೌಧ ತಲುಪಿ ಧರಣಿ ಮಾಡಿ ನಂತರ ತಹಸೀಲ್ದಾರರಿಗೆ ಮನವಿ ಅರ್ಿಸಲಾಗುವದೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರತನ ಹಲವಾಯಿ, ಸಂತೋಷ ಬಿರಾದಾರ, ಅನೀಲ ರಾಠೋಡ, ಸ್ವರೂಪ ಶಿಂಧೆ, ಸತೀಶ ಪವಾರ ಮತ್ತಿತರಿದ್ದರು.