ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜು.15ರಂದು ಧರಣಿ ಸತ್ಯಾಗ್ರಹ
ಇಂಡಿ: ಹೂಗಾರ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವತೆ ಒತ್ತಾಯಿಸಿ ಜುಲೈ 15 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೂಗಾರ ಸಮಾಜ ತಾಲೂಕಾ ಉಪಾಧ್ಯಕ್ಷ ಮಹೇಶ ಹೂಗಾರ ತಿಳಿಸಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಮುದಾಯದ ಪ್ರಮುಖ ಬೇಡಿಕೆಗಳಾದ ಹೂಗಾರ ಮಾದಯ್ಯನವರ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕು, ಪರಿಶಿಷ್ಟ ಪಂಗಡಕ್ಕೆ ಹೂಗಾರ ಸಮಾಜವನ್ನು ಸೇರಿಸಬೇಕು, ಜಿಲ್ಲೆಗೊಂದು ಹೂಗಾರ ಸಮಾಜದ ಸಮುುದಾಯ ಭವನ ನಿರ್ಮಿಸುವುದು, ಕಲ್ಯಾಣ ಕರ್ನಾಟಕದಲ್ಲಿ ಗುರುಕುಲ ಸ್ಥಾಪನೆ ಮಾಡುವುದು, ರಾಜ್ಯದ ಎಲ್ಲಾ ಬಸ ತಂಗುದಾಣಗಳಲ್ಲಿ ಹೂಗಾರ ಸಮುದಾಯಕ್ಕೆ ಒಂದು ಮಳಿಗೆ ಮೀಸಲಿರಿಸುವುದು, ಹೂ ಬೆಳೆಯುವ ಹೂಗಾರರಿಗೆ ಸರಕಾರ ಅರ್ಥಿಕ ಭದ್ರತೆ ಒದಗಿಸಬೇಕು, ಎಲ್ಲಾ ಸರಕಾರಿ ಕಚೇರಿಗಳಲ್ಲಿ ಹೂಗಾರ ಮಾದಯ್ಯ ಜಯಂತಿ ಕಡ್ಡಾಯ ಮಾಡಬೇಕು. ಹೂಗಾರ ಸಮಾಜದ ಪೀಠಕ್ಕೆ 8 ಎಕರೆ ಭೂಮಿ ನೀಡಬೇಕು, ಸರಕಾರ ರಾಜ್ಯದ ಬಜೆಟ್ ಮಂಡಿಸುವಾಗ 100 ಕೋಟಿ ಅನುದಾನ ಮೀಸಲಿಡಬೇಕು, ಭೂಮಿ ಸಾಗುವಳಿ ಮಾಡುವ ಭೂಮಿ ದೇವರ ಹೆಸರಿನ ಮೇಲೆ ಇರವುದನ್ನು ಸಾಗುವಳಿದಾರರ ಹೆಸರಿನಿಂದ ವರ್ಗಾಯಿಸಬೇಕು, ಹೂ ಸಾಗಾಣಿಕೆ ಸಾರಿಗೆ ಬಸ್ಸ್ಗಳಲ್ಲಿ ಉಚಿತವಾಗಿ ಸೌಲಭ್ಯ ಒದಗಿಸಬೇಕು. ಹೂಗಾರ ಸಮಾಜ ಆರ್ಥಿಕವಾಗಿ, ಶೈಕ್ಷಣಿಕ ಸಾಕಷ್ಟು ಹಿಂದುಳಿದಿರುವದರಿಂದ ಈ ಎಲ್ಲಾ ಬೇಡಿಕೆಗಳು ಸರಕಾರ ಈಡೇರಿಸಬೇಕು ಎಂದು ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ರಾಜ್ಯದ ಹೂಗಾರ ಸಮುದಾಯದ ಬಂಧು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದರು.