ವಾಹನಗಳಿಗೆ ಪ್ಯಾನಿಕ್ ಬಟನ್, ಜಿಪಿಎಸ್ ಅಳವಡಿಕೆಗೆ ಆಗ್ರಹಿಸಿ ಪ್ರತಿಭಟನೆ
ಬ್ಯಾಡಗಿ,24: ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯು ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆಗೆ ಆಗ್ರಹಿಸುತ್ತಿರುವುದು ಅವೈಜ್ಞಾನಿಕ ಎಂದು ವಿರೋಧಿಸಿ ಮಂಗಳವಾರ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಬ್ಯಾಡಗಿಯ ನ್ಯೂ ಭಾರತ ಕಾರ್ ಟ್ಯಾಕ್ಸಿ ಮಾಲೀಕರು ಚಾಲಕರ ಸಂಘದ ಕಾರ್ಯಾಲಯದ ಮುಂಭಾಗದಲ್ಲಿ ಸರ್ಕಾರದ ವಿರುದ್ಧ ಸಂಘಟನೆಯ ಕಾರ್ಯಕರ್ತರು ಧಿಕ್ಕಾರ ಕೂಗಿದರು. ತಾಲೂಕಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ ಅಧ್ಯಕ್ಷ ಬಸವರಾಜ ಹನುಮಾಪುರ ಮಾತನಾಡಿ ಈ ಸಾಧನಗಳ ಅಳವಡಿಕೆಯ ಆದೇಶ ಗೊಂದಲಮಯವಾಗಿದೆ ಇದು ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕ ಮಾಲಕರ ಉದ್ಯೋಗದ ಮೇಲೆ ಹೆಚ್ಚುವರಿ ಹೊರೆಯಾಗಿದೆ.
ರಾಜ್ಯ ಸರಕಾರ ಈ ಸಾಧನ ಅಳವಡಿಸಲು 7,590 ರೂ. ಗಳನ್ನುನಿಗದಿಪಡಿಸಿದ್ದರೂ ರಾಜ್ಯದ ಎಲ್ಲ ಸಾರಿಗೆ ಕಚೇರಿಗಳಲ್ಲಿ 13,000 ರೂ.ನಿಂದ 15,000 ರೂ.ವರೆಗೆ ಪಡೆಯಲಾಗುತ್ತಿದೆ. ಇದು ವಾಹನ ಚಾಲಕ ಮಾಲಕರಿಗೆ ಮಾಡುತ್ತಿರುವ ಅನ್ಯಾಯ ಎಂದು ಒತ್ತಾಯಿಸಿದರು. ನಂತರ ತಾಲೂಕಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ ಕಾರ್ಯಕರ್ತರು ಹಾವೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರವಿ ಹುಣಸಿಮರದ, ನಬಿಸಾಬ್ ಅರಮನಿ, ಪವನ್, ಸದಾನಂದ, ಹಜರತ್ ಅಲಿ, ಕರಬಸಪ್ಪ, ಹನಮಂತ ಪಾಟೀಲ್, ಪರಶುರಾಮ, ಮಂಜು ಬೈರಾಪುರ, ಮಂಜು ಬೋವಿ, ಸಲೀಂ ಯಾದವಾಡ, ಇನ್ನೂ ಅನೇಕ ಸದಸ್ಯರು ಭಾಗವಹಿಸಿದ್ದರು