ರಾಣೆಬೆನ್ನೂರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತರ-ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕಾರ್ಯಕರ್ತರು ತಹಶೀಲ್ದಾರ ಕಚೇರಿ ಎದುರುಗಡೆ ಪ್

ರಾಣಿಬೆನ್ನೂರ 16: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕಿಯರಿಗೆ ಯಾವುದೇ ರೀತಿಯ ಬೇಡಿಕೆ ಈಡೇರಿಕೆಗೆ ಪರಿಹಾರ ಸಿಗದಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸೋಮವಾರದಂದು ನಗರದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.

ಬೆಂಗಳೂರ ಛಲೋ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಲಿಲ್ಲ, ಬಜೆಟ್‍ನಲ್ಲಿ ಯಾವುದೇ ಅನುದಾನ ನೀಡಿಲ್ಲದಿರುವುದು ಪ್ರತಿಭಟನೆಗೆ ಮುಂದಾಗಬೇಕಾಯಿತು. ಇದರ ಜೊತೆಗೆ ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಳ ಮಾಡಬೇಕು, 2015 ರ ಆನಂತರ ನಿವೃತ್ತಿಯಾದ 7294 ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಡಿಗಂಟು ನೀಡಬೇಕು, ಇಎಸ್‍ಐ ಯೋಜನೆ ಜಾರಿಗೊಳಿಸಬೇಕು, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‍ಕೆಜಿ/ಯುಕೆಜಿ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.    ಪ್ರತಿಭಟನೆಯಲ್ಲಿ  ಸಂಘದ ಅಧ್ಯಕ್ಷೆ ನಾಗಮ್ಮ ಮುದಕಣ್ಣನವರ, ಕಾರ್ಯದರ್ಶಿ ಭಾರತಿ ಕೋಪರ್ಡೆ, ಸಲ್ಮಭಾನು, ಹೊನ್ನಪ್ಪ ಮರಿಯಮ್ಮನವರ, ಹಾಲಮ್ಮ, ಚಂದ್ರಕಲಾ ಆರ‍್ಪಿ, ನಾಗರತ್ನ ಎಲಿಗಾರ, ಪ್ರೇಮಾ ಬೂದಪೂರ, ನಾಗರತ್ನ ರಡ್ಡೇರ, ಶಾಂತ ಕುಲಕರ್ಣಿ, ಹಾಲಮ್ಮ, ಮಲ್ಲ;ಮ್ಮ, ರೇಣುಕಾ, ಮಂಜುಳಾ, ಶಾರದಾ ಕುಪ್ಪೇಲೂರ, ಶಿಲ್ಪ, ಕಮಲ ಕಾಸಂಭಿ, ಶೋಭಾ ನಾಯ್ಕ ಸೇರಿದಂತೆ 100 ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಇದ್ದರು.

ಇದಕ್ಕೂ  ಮುನ್ನ ಸ್ಥಳೀಯ ಪಿಬಿ ರಸ್ತೆಯ ಕೆಇಬಿ ಗಣೇಶ ದೇವಸ್ಥಾನದ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಬಸ್ ನಿಲ್ದಾಣ, ಬಿಎಸ್ ರಸ್ತೆ, ಅಂಚೆ ವೃತ್ತ, ಎಂಜಿ ರಸ್ತೆ, ಕುರುಬಗೇರಿ ಪಿಬಿ ರಸ್ತೆಯ ಮೂಲಕ ತಹಸೀಲ್ದಾರ ಕಛೇರಿಗೆ ತಲುಪಿತು.

ಸುದ್ದಿ ಓದಿ