ಇಂಡಿ

ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಸ.22ರಂದು ಪ್ರತಿಭಟನೆ

ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಸ.22ರಂದು ಪ್ರತಿಭಟನೆ

ಇಂಡಿ19:  ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆಂದು  ಒತ್ತಾಯಿಸಿ ಬೆಂಗಳೂರಿನಲ್ಲಿ ಸೆ. 22 ರಂದು  ಸಾಂಕೇತಿಕವಾಗಿ ಪ್ರತಿಭಟಿಸಿ ಸರಕಾರದ ಗಮನ ಸೆಳೆಯಲು ಮುಧೋಳದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ  ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ  ಬಸವರಾಜ ಸಾಹುಕಾರ ಕುಮಸಗಿ ತಿಳಿಸಿದ್ದಾರೆ.

ರವಿವಾರ ಇಂಡಿಯಲ್ಲಿ ನಡೆದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಖಾಸಗಿ ಶಾಲೆಯಲ್ಲಿ ನೂರಾರು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಲು ಈಗಾಗಲೇ ಮುಖ್ಯಮಂತ್ರಿಗಳು ಶಿಕ್ಷಕರ ಸಚಿವರ  ಗಮನಕ್ಕೆ ತರಲಾಗಿದೆ. ಹಂತ ಹಂತವಾಗಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಾವೆಲ್ಲರೂ ಸಜ್ಜಾಗಬೇಕಿದೆ. ಮುಂದಿನ ದಿನಗಳಲ್ಲಿ ವಿಧಾನಪರಿಷತ್ ಸದಸ್ಯರ ಮನೆಯ ಮುಂದೆ ಧರಣಿ ಕುಳಿತು ಕೊಳ್ಳುವ ಕುರಿತು ಚರ್ಚಿಸಲಾಗುವದು.

ಅನುದಾನಕ್ಕೆ  ಒಳಪಡಿಸುವ ನಿಟ್ಟಿನಲ್ಲಿ  ಮೊದಲು ನಾವೆಲ್ಲರೂ ತಾಲೂಕಾ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಸಂಘಟನೆಯನ್ನು ಬಲವರ್ಧನೆ  ಮಾಡಬೇಕು. ಪ್ರತಿ ವಿಭಾಗ, ಜಿಲ್ಲಾ ಮಟ್ಟದಲ್ಲಿ  ಹೋರಾಟಗಳ ಮೂಲಕ ಸರಕಾರದ ಕಣ್ಣು ತೆರೆಸಬೇಕು ಎಂದರು.

ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕೆಲವರಿಗೆ ಮಾತ್ರ ಪರಿಹಾರ ಬಂದಿದೆ. ಪರಿಹಾರ ಕಾರ್ಯ ಸಮರ್ಪಕ ನಡೆದಿಲ್ಲ. ಕೂಡಲೇ ಸರಿಪಡಿಸಬೇಕು. ಸರಕಾರ ಮೂರು ಕೋಟಿ ರೂ ಪರಿಹಾರ ನೀಡುವದಾಗಿ ತಿಳಿಸಿತ್ತು. ಎಲ್ಲ ಅನುದಾನರಹಿತ ಶಾಲೆಗಳಲ್ಲಿ ಕೆಲವರಿಗೆ ಮಾತ್ರ ಬಂದಿವೆ ಎಂದು ಎಲ್ಲರೂ ಒತ್ತಾಯಿಸಿದರು.

ಸಭೆಯಲ್ಲಿ ಬ್ರಿಲಿಯಂಟ್ ಶಾಲೆಯ ಸೌಕತಲಿ ನಾಲಬಂದ, ಏಂಜಲ್ಸ ಶಾಲೆಯ ಸ್ಟಿಫನ್  ಶಿರೋಮಣಿ, ವೀರ ಭಾರತಿ ವಿದ್ಯಾಸಂಸ್ಥೆಯ ಅನಂತ ಜೈನ, ಗುರುಬಸವ ಶಾಲೆಯ ಪುಂಡಲೀಕ ಹೂಗಾರ, ಭಾಗ್ಯವಂತಿ ಪ್ರೌಢಶಾಲೆ ಚವಡಿಹಾಳದ ಅಪ್ಪಾಸಾಹೇಬ ದಶವಂತ, ನ್ಯಾಸನಲ್ ಉರ್ದು ಶಾಲೆಯ ಮಿಟ್ಟು ಶೇಖ, ಜ್ಞಾನಗಂಗೋತ್ರಿ ಶಾಲೆಯ ಜಿ.ಜಿ.ಘೋರ್ಪಡೆ, ಸಾಯಿ ಪಬ್ಲಕ್ ಶಾಲೆಯ ಕಲಘಟಗಿ ಮತ್ತಿತರಿದ್ದರು.


ಸುದ್ದಿ ಓದಿ