ಶಿಗ್ಗಾವ್

ರೈತರ ವಾಹನಗಳಿಗೆ ಉಚಿತ ಪೆಟ್ರೋಲ್ ಹಾಕಿ ಪ್ರತಿಭಟನೆ

ರೈತರ ವಾಹನಗಳಿಗೆ ಉಚಿತ ಪೆಟ್ರೋಲ್ ಹಾಕಿ ಪ್ರತಿಭಟನೆ

ಶಿಗ್ಗಾವಿ 14:  ಪಟ್ಟಣದ ಅರಳಿ ಪೆಟ್ರೋಲ್ ಬಂಕ್‌ನಲ್ಲಿ ಕಾಂಗ್ರೆಸ್ ಘಟಕದ ವತಿಯಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ತೊಲಗಿಸಿ, ತೊಲಗಿಸಿ ಬಿಜೆಪಿ ತೊಲಗಿಸಿ, ಎಂಬ ಘೋಷಣೆಯನ್ನು ಹಾಕಿ  ಹಾಗೂ ರೈತರಿಗೆ ಉಚಿತವಾಗಿ ಪೆಟ್ರೊಲ್ ಹಾಕಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು  

ಈ ವೇಳೆ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯನ್ನು ಕಂಡಿಸುವ ನಿಟ್ಟಿನಲ್ಲಿ ರೈತರ ಬೈಕ್‌ಗಳಿಗೆ ಉಚಿತ ಪೆಟ್ರೋಲ್ ಹಾಕಿಸುವುದು, ಬೈಕ್‌ಗಳನ್ನು ತಳ್ಳುವುದು ಮತ್ತು 100 ನಾಟ್‌ಓಟ್ ಪೋಷ್ಟರ್ ಸೇರಿದಂತೆ ಇತರ ಅಣುಕು ನೋಟಗಳನ್ನು ಮಾಡುವ ಮೂಲಕ ಬಿಜೆಪಿ ಸರಕಾರದ ವಿರುದ್ದು ಘೋಷಣೆ ಕೂಗಿ ತೀರ್ವ ಅಕ್ರೋಷ ವ್ಯಕ್ತಪಡಿಸಿ ಒಂದು ವರೆ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಮುಖಂಡರುಗಳಾದ ಎಸ್ ಎಫ್ ಮಣಿಕಟ್ಟಿ, ಮುಸ್ತಾಕಾಹ್ಮದ ಮುಲ್ಲಾ, ಮಲ್ಲಿಕಾರ್ಜುನಗೌಡ ಪಾಟೀಲ, ಗುರುನಗೌಡ ಪಾಟೀಲ, ಶ್ರೀಕಾಂತ ಪೂಜಾರ, ರಬ್ಬಾನಿ ತರಿನ್, ಮಂಜುನಾಥ ತಿಮ್ಮಾಪುರ, ಶಬ್ಬೀರ್ ಮಕಾಂದಾರ್, ಸುಧಿರ ಲಮಾಣಿ, ಮಹಾಂತೇಶ ಸಾಲಿ, ಮುಸ್ತಾಕ ತಹಶಿಲ್ದಾರ, ರಶೀದ ಗೊಟಗೋಡಿ, ಶಂಭು ನೇರ್ತಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ