ರಾಣೆಬೆನ್ನೂರ

ಉದ್ಧವ ಠಾಕ್ರೆ ಉದ್ಧಟತನದ ಹೇಳಿಕೆ ಖಂಡಿಸಿ ಪ್ರತಿಭಟನೆ

ಉದ್ಧವ ಠಾಕ್ರೆ ಉದ್ಧಟತನದ ಹೇಳಿಕೆ ಖಂಡಿಸಿ ಪ್ರತಿಭಟನೆ

ರಾಣಿಬೆನ್ನೂರ 30: ಮಹಾರಾಷ್ಟ್ರ ಮರಾಠಿಗರು ಬೆಳಗಾವಿ ವಿಚಾರವನ್ನು ಇಟ್ಟು ಕೊಂಡು ರಾಜ್ಯದಲ್ಲಿ ಶಾಂತಿ ಕದಲುತ್ತಿದ್ದಾರೆ. ಈಗಾಗಲೇ ಮಹಾಜನ್ï ವರದಿ ಬೆಳಗಾವಿ, ಕಾರವಾರ, ಬೀದರ್ 895 ಹಳ್ಳಿಗಳು ಕರ್ನಾಟಕಕ್ಕೆ ಸೇರಿವೆ ಎಂದು ಹೇಳಿದೆ. ಬೆಳಗಾವಿಯ ಗೊಂದಲ ಮುಗಿದ ಅಧ್ಯಾಯ, ಆದರೆ ಮಹಾರಾಷ್ಟ್ರದ ಸಿಎಂ ಇದನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಿಸಿಕೊಳ್ಳುತ್ತಿದ್ದಾರೆ ಎಂದು ತಾಲೂಕಾ ಅಧ್ಯಕ್ಷ ಕೊಟ್ರೇಶ ನೆಲೋಗಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಮಹಾರಾಷ್ಟ್ರ ಶೀಘ್ರದಲ್ಲಿ ಸೇರಸಿಕೊಳ್ಳಲಾಗುವುದು ಎಂದು ಉದ್ಧಟತನದ ಮಾತುಗಳನ್ನು ಖಂಡಿಸಿ. ಪ್ರವೀಣಕುಮಾರ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ. ಶಹರ ಪೊಲೀಸ್ ಠಾಣೆಯಲ್ಲಿ ಅವನ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಇತ್ತೀಚಿಗೆ ಬಿಜೆಪಿ ಸರ್ಕಾರ ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ. ಪ್ರಪಂಚದ 6ಸಾವಿರ ಬಾμÉಯಲ್ಲಿ ಕನ್ನಡಕ್ಕೆ 29 ಸ್ಥಾನವಿದೆ, ಸಿಎಂ ಯಡಿಯೂರಪ್ಪನವರು ಕನ್ನಡವನ್ನು ಕಡೆಗಣಿಸಿದ್ದಾರೆ, ಎಲ್ಲಾ ಭಾಷೀಕರಿಗೆ ಪ್ರಾಧಿಕಾರ ನಿರ್ಮಾಣ ಮಾಡುತ್ತಾರೆ ಎನ್ನುವ ಇವರು, ಕರ್ನಾಟಕದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಸಂಪೂರ್ಣ ಅಧಿಕಾರ ಏಕೆ ನೀಡಿಲ್ಲ ಎಂದು ದೂರಿದ ಅವರು, ಕೇಂದ್ರ ಸರ್ಕಾರ ತಕ್ಷಣ ಮಹಾರಾಷ್ಟ್ರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ನಗರ ಅಧ್ಯಕ್ಷ ವಸಂತಗೌಡ ಪಾಟೀಲ, ಷಣ್ಮುಖ ಮೆಣಸಿನಹಾಳ, ಗುರುರಾಜ ಗೋಜನೂರ, ಸಿ.ಬಿ.ದೊಡ್ಡಗೌಡ್ರ, ಲಕ್ಷ್ಮಿ ಕಿರಣ, ರೇಖಾ ಆರೇರ, ಮಾಲತೇಶ ಕಾಯಕದ, ಬಸವರಾಜ ಪಾಟೀಲ, ಚಂದ್ರಶೇಖರ ಕಡ್ಲಿಬಾಳ, ರಾಜು ಕಡೇಮನಿ, ಬಸವರಾಜ ಕರ್ಜಗಿ, ಹಾಲೇಶ ಐರಣಿ, ರಾಜೇಶ ಮತ್ತಿತರರು ಇದ್ದರು.


ಸುದ್ದಿ ಓದಿ