ಜಮಖಂಡಿ

ನಿಗದಿತ ಸ್ಥಳವನ್ನು ನೀಡಲು ಆಗ್ರಹಿಸಿ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ನಿಗದಿತ ಸ್ಥಳವನ್ನು ನೀಡಲು ಆಗ್ರಹಿಸಿ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ಜಮಖಂಡಿ  19: ನಗರದ ಬೀದಿಬದಿ ವ್ಯಾಪಾರಿಗಳು ಪ್ರತಿನಿತ್ಯ ಅಧಿಕಾರಿಗಳ ಕಿರಿಕಿರಿಯಿಂದ ಬೇಸತ್ತು ತಮಗೆ ನಿಗದಿತ ಸ್ಥಳವನ್ನು ನೀಡಬೇಕೆಂದು ಆಗ್ರಹಿಸಿ, ಹನುಮಾನ ಚೌಕದ ನಡುರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳು ಹಾಗೂ ಮಹಿಳೆಯರು ಕುಳಿತು ಪ್ರತಿಭಟನೆಯನ್ನು ನಡೆಸಿದರು. 

ಪ್ರತಿನಿತ್ಯ ಅಧಿಕಾರಿಗಳಿಂದ ನಮಗೆ ತೊಂದರೆಯಾಗುತ್ತಿದೆ. ನಮ್ಮ ವ್ಯಾಪಾರ ವಹಿವಾಟಗಳನ್ನು ಬೀದಿಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ವಹಿವಾಟವನ್ನು ಮಾಡಿಕೊಳ್ಳುತ್ತೇವೆ. ಆದರೆ ನಮ್ಮಿಂದ ಯಾವುದೇ ಟ್ರಾಫಿಕ್ ತೊಂದರೆ ಇರುವುದಿಲ್ಲ. ಆದರೆ ಅಧಿಕಾರಿಗಳು ಬಂದು ನಮ್ಮ ವ್ಯಾಪಾರದ ಸಮಯದಲ್ಲಿ ತೊಂದರೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು. 

ನಗರದಲ್ಲಿ ಹಳೇ ಜೈಲಿನಲ್ಲಿ ಸ್ಥಳ ಇರುತ್ತದೆ. ಅದನ್ನು ಸ್ವಚ್ಚತೆಗೊಳಿಸಿ ನಮಗೆ ಅನುಕೂಲ ಮಾಡಿಕೊಡಬೇಕು. ಬೀದಿಬದಿ ವ್ಯಾಪಾರಿಗಳಿಂದ ಪ್ರತಿ ದಿನ ಟ್ಯಾಕ್ಸ್‌ ಪಡೆದುಕೊಳ್ಳುತ್ತಾರೆ. ಪ್ರತಿ ತಿಂಗಳು ನಮ್ಮಂದ ಸಾವಿರಾರು ರೂಪಾಯಿಗಳ ಟ್ಯಾಕ್ಸ್‌ ಸರಕಾರಕ್ಕೆ ಜಮೆಯಾಗುತ್ತಿದೆ. ಆದರೆ ನಮಗೆ ಯಾವುದೇ ಅನುಕೂಲತೆಗಳು ಇಲ್ಲ. ಸರಿಸುಮಾರು 330 ರಿಂದ 1500 ಜನ ನಗರದ ಹಾಗೂ ಗ್ರಾಮೀಣ ಭಾಗದವರು ಬಂದು ವ್ಯಾಪಾರ ವಹಿವಾಟುಗಳನ್ನು ಮಾಡಿಕೊಳ್ಳುತ್ತಾರೆ. ಧೀಡಿರನೆ ಬಂದು ವ್ಯಾಪಾರ ಬಂದ ಮಾಡಿ. ಬೇರೆ ಕಡೆಗೆ ಹೋಗಿ ಎಂದು ಹೇಳುತ್ತಾರೆ ಇದರಿಂದ ಬೇಸತು ಹೋಗಿದೆವೆ. ನಮಗೆ ಶಾಶ್ವತವಾಗಿ ಸ್ಥಳವನ್ನು ನಿಗದಿ ಮಾಡಬೇಕು ಎಂದರು. 

ಲಕ್ಕನ ಕೆರೆ ಹಾಗೂ ಚನ್ನಮ್ಮ ಮಾರುಕಟ್ಟೆಗೆ ವ್ಯಾಪಾರ ವಹಿವಾಟ ಮಾಡಲು ಹೋಗಿ ಎಂದು ಹೇಳುತ್ತಾರೆ. ಅಲ್ಲಿ ಸರಿಯಾದ ವ್ಯವಸ್ಥೆಯು ಇರುವುದಿಲ್ಲ. ನಾವುಗಳು 330 ರಿಂದ 1500 ಜನರು ಇದ್ದವೆ. ಎಲ್ಲರಿಗೂ ಸ್ಥಳದ ವ್ಯವಸ್ಥೆ ಇರುವುದಿಲ್ಲ. ನಮ್ಮಗೆ ಅಧಿಕಾರಿಗಳು ಲಕ್ಕನ ಕರೆಯ ಹತ್ತಿರ ಹಾಗೂ ಚನ್ನಮ್ಮ ಮಾರುಕಟೆಗೆ ಹೋಗಿ ಎಂದು ಒತ್ತಾಯಿಸುತ್ತಾರೆ. ಆ ಸ್ಥಳಗಳಿಗೆ ನಾವುಗಳು ಯಾರು ಹೋಗುವುದಿಲ್ಲ. ಬೇಕಾದರೆ ಹಳೆಯ ಜೈಲಿನಲ್ಲಿ ಇರುವ ಜಾಗೆಯನ್ನು ಸ್ವಚ್ಚಗೊಳಿಸಿ. ವ್ಯಾಪಾರ ಮಾಡಲು ಕಟ್ಟೆಗಳನ್ನು ಕಟ್ಟಿಸಿಕೊಟ್ಟರೆ ಮಾತ್ರ ನಾವುಗಳು ಹೋಗುತ್ತೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ