ತಾಳಿಕೋಟಿ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ತಾಳಿಕೋಟೆ ಪಟ್ಟಣದ ಪೆಟ್ರೋಲ್ ಪಂಪಗಳ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ

ತಾಳಿಕೋಟೆ15: ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಖಂಡಿಸಿ ಕಾಂಗ್ರೇಸ್ ಪಕ್ಷದ ವತಿಯಿಂದ ಪಟ್ಟಣದ ವಿವಿಧ ಪೆಟ್ರೋಲ್ ಪಂಪಗಳ ಮುಂದೆ ಪೆಟ್ರೋಲ್ 100 ನಾಟ್ ಔಟ್ ಹೆಸರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. 

ಪಟ್ಟಣದ ರಾಯರಕರ ಪೆಟ್ರೋಲ್ ಪಂಪ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆಯನ್ನು ನಡೆಸಲಾಯಿತು. ಮಾಜಿ ಸಚಿವ ಸಿ.ಎಸ್‌.ನಾಡಗೌಡ(ಅಪ್ಪಾಜಿ), ಮಾತನಾಡಿ, ಕಳೆದ 12 ತಿಂಗಳಲ್ಲಿ ಸತತ 52 ಬಾರಿ ಪೆಟ್ರೋಲ್ ಮತ್ತು ಡಿಸೇಲ್ ಏರಿಸಿದ್ದು, ಪೆಟ್ರೋಲ್ ಮೇಲೆ 65 ರೂ.ಮತ್ತು ಡಿಸೇಲ್ ಮೇಲೆ 46 ರೂ. ತೆರಿಗೆ ಹಾಕಿರುವುದು ದಾಖಲೆಯ ದರೋಡೆಯಾಗಿದೆ. ನೆರೆಯ ಶ್ರೀಲಂಕಾ, ಭೂತಾನ್, ಬಾಂಗ್ಲಾ, ಪಾಕಿಸ್ತಾನ ಹೋಲಿಸಿದರೆ 60 ಪ್ರತಿಶತ ಹೆಚ್ಚು ಭಾರತದಲ್ಲಿ ಬೆಲೆ ಹೆಚ್ಚಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ಮತ್ತು ಆಡಳಿತದಲ್ಲಿನ ವೈಫಲ್ಯದಿಂದ ವಿದ್ಯುತ್, ಪೆಟ್ರೊಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ಬೀಜ, ರಸಗೊಬ್ಬರಗಳ ದರ ಏರಿಕೆ ಕಂಡಿವೆ. ಆಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿವೆ. ಇನ್ನೊಂದೆಡೆ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಎರಡೂ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಕೊರೊನಾ ಭೀಕರ ಕಾಯಿಲೆಯ ಸಂದರ್ಭದಲ್ಲಿ ರೈತರು, ರೈತ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ಬದಿಯ ಸಣ್ಣ ಅತಿಸಣ್ಣ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮನೆ, ಭೂಮಿ ಕಳೆದುಕೊಂಡಿರುವ ಕುಟುಂಬಗಳು ಸೇರಿದಂತೆ ಬಹುತೇಕರು ತಮ್ಮ ನಿತ್ಯ ಬದುಕು ಕಟ್ಟಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ. ಆಳುತ್ತಿರುವ ಸರಕಾರಗಳು ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸದೇ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಹಾಕುತ್ತಿರುವದು ಖಂಡನೀಯವಾಗಿದೆ. ಸದಾ ಸುಳ್ಳಿನ ಮೂಲಕ ಆಡಳಿತ ನಡೆಸುವುದು ರಾಜ್ಯದ ಜನತೆಗೆ ಗೊತ್ತಾಗಿದೆ. ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇದ್ದರೂರಾಜ್ಯದ ಜನತೆಯ ಹಿತಕಾಯಲು ಯಡಿಯೂರ​‍್ಪ ನೇತೃತ್ವದ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು. 

ಸೈಯದ್‌ಶಕೀಲ ಅಹ್ಮದ ಖಾಜಿ, ಕೆಪಿಸಿಸಿ ಸದಸ್ಯ ಬಿ.ಎಸ್‌.ಪಾಟೀಲ ಯಳಗಿ, ಪುರಸಭೆ ಉಪಾದ್ಯಕ್ಷ ಮುಸ್ತಫಾ ಚೌದ್ರಿ, ಜಿ.ಎಸ್‌.ಕಶೇಟ್ಟಿ, ನಿವೃತ್ತ ಎಸ್‌ಪಿ ಎಸ್‌.ಬಿ.ಕಟ್ಟಿಮನಿ, ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಪುರಸಭೆ ಸದಸ್ಯರಾದ ಯಾಸೀನ ಮಮದಾಪೂರ, ಅಕ್ಕಮಹಾದೇವಿ ಕಟ್ಟಿಮನಿ, ಮಲ್ಲಿಕಾರ್ಜುನ ಪಟ್ಟಣಶೇಟ್ಟಿ, ನೀಲಮ್ಮ ಪಾಟೀಲ, ಶೋಭಾ ಕಟ್ಟಿಮನಿ, ಮಾಸೂಮ ಕೆಂಬಾವಿ, ಮಹಿಬೂಬಶ್ಯಾ ಮಕಾನದಾರ, ಮೋದಿನಸಾಬ ನಗಾರ್ಚಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ