ಬ್ಯಾಡ್ಗಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಲೋಕದರ್ಶನ ವರದಿ

ಬ್ಯಾಡಗಿ 08: ಹಾವೇರಿ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು. ಬಿಜೆಪಿ ಸರ್ಕಾರದ ಅವದಿಯಲ್ಲಿ ಜಾರಿಗೆ ಬಂದ ರೈತಪರ ಯೋಜನೆಗಳನ್ನು ರದ್ದುಗೊಳಿಸಿರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಡಗಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಬಳಿಕ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಮಾಜಿ ಶಾಸಕ ವಿರೂಪಾಶಕ್ಷಪ್ಪ ಬಳ್ಳಾರಿ ಮಾತನಾಡಿ, ರೈತರ ಬಗ್ಗೆ ಹಗುರುವಾಗಿ ಮಾತನಾಡುವ ಕಾಂಗ್ರೇಸ್ ಮುಖಂಡರು ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಬಂದು ಆತ್ಮಹತ್ಯೆ ಮಾಡಿಕೊಂಡರೆ 6.ಕೋಟಿ ಬೆಲೆಬಾಳುವ ಆಸ್ತಿಯನ್ನು ಅವರ ಹೆಸರಿಗೆ ಬರೆದುಕೊಡುವುದಾಗಿ ಹೇಳಿದರು. ಸರ್ಕಾರದಿಂದ 5.ಲಕ್ಷ ಸಿಗುತ್ತಿದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಕಾಂಗ್ರೇಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಸರ್ಕಾರದ ಅವದಿಯಲ್ಲಿ ಜಾರಿ ಮಾಡಿದ ರೈತಪರ ಯೋಜನೆಗಳನ್ನು ಮುಂದುವರೆಸಲಿ ಎಂದರು.

ರೈತ ಬರಗಾಲದಿಂದ ತತ್ತರಿಸಿದರು ಮದ್ಯಂತರ ಪರಿಹಾರ ಕೊಡುತ್ತಿಲ್ಲ. ಕಳಪೆ ವಿದ್ಯುತ್ ಕೊಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ನದಿಗಳಿಂದ ಸರಿಯಾದ ಸಮಯಕ್ಕೆ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಮಾಡಬೇಕು. ಕೃಷಿ ಸಮ್ಮಾನ ಯೋಜನೆ ಹಾಗೂ ರೈತ ಮಕ್ಕಳ ವಿದ್ಯಾನಿದಿ ಬಂದ್ ಮಾಡಿದ್ದನ್ನು ನೋಡಿದರೆ ರೈತ ವಿರೋಧಿ ಸಕರ್ಾರವೆಂದು ಮೇಲೆ ಕಾಣುತ್ತದೆ ಎಂದು ಆರೋಪಿಸಿದರು.

ಪುರಸಭೆ ಸದಸ್ಯರಾದ ಫಕ್ಕೀರಮ್ಮ ಛಲವಾದಿ, ಗಾಯತ್ರಿ ರಾಯ್ಕರ, ಸರೋಜಮ್ಮ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿರೇಂದ್ರ ಶೆಟ್ಟರ್, ತಾಲೂಕಾಧ್ಯಕ್ಷ ಹಾಲೇಶ ಜಾದವ, ನ್ಯಾಯವಾದಿ ನಿಂಗಪ್ಪ ಬಟ್ಟಲಕಟ್ಟಿ, ಮುಖಂಡರಾದ ಸುರೇಶ ಉದ್ಯೋಗಣ್ಣನವರ, ಮುರಿಗೆಪ್ಪ ಶೆಟ್ಟರ, ಶಂಕ್ರಣ್ಣ ಮಾತನವರ, ಸುರೇಶ ಯತ್ನಳ್ಳಿ, ಹೆಮಂತ ಸರವಂದ, ಸುರೇಶ ಆಷಾದ, ಜಿತೇಂದ್ರ ಸುಣಗಾರ, ಹೆಮಂತ ಶೆಟ್ಟರ, ಬಸವರಾಜ ಮುಚ್ಚಟ್ಟಿ, ಮಲಕಪ್ಪ ಮುಚ್ಚಟ್ಟಿ, ಬಸವರಾಜ ಹಲಗೇರಿ, ಶಶೀಧರ ಹೊಸಳ್ಳಿ, ವಿರೇಶ ಅಂಗಡಿ, ಶಂಕ್ರಪ್ಪ ಅಕ್ಕಿ, ವಿಷ್ಣುಕಾಂತ ಬೆನ್ನೂರ ಸೇರಿದಂತೆ ಇನ್ನಿತರರು ಇದ್ದರು 

ಸುದ್ದಿ ಓದಿ